ಇಂಗ್ಲೆಂಡ್ ಸರಣಿ ಬಳಿಕ ಟೀಂ ಇಂಡಿಯಾ ಮಾಜಿ ನಾಯಕ ಎಂ ಎಸ್ ಧೋನಿಗೆ ಫ್ರೀ ಟೈಮ್. ಸೆಪ್ಟೆಂಬರ್ 15 ರಿಂದ ಧೋನಿ ಮತ್ತೆ ಕ್ರಿಕೆಟ್‌ನಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಆದರೆ ಈ ನಡುವೆ ಸಿಕ್ಕಿರೋ ಸಮಯದಲ್ಲಿ ಧೋನಿ ಕುಟುಂಬದ ಜೊತೆ ಶಿಮ್ಲಾ ಟೂರ್ ಹೋಗಿದ್ದಾರೆ.
ಶಿಮ್ಲಾ(ಆ.28): ಟೀಂ ಇಂಡಿಯಾ ಮಾಜಿ ನಾಯಕ ಎಂ ಎಸ್ ಧೋನಿಗೆ ಸದ್ಯ ವಿಶ್ರಾಂತಿ ಸಮಯ. ಇಂಗ್ಲೆಂಡ್ ವಿರುದ್ಧದ ನಿಗಧಿತ ಓವರ್ ಕ್ರಿಕೆಟ್ ಸರಣಿ ಬಳಿಕ ಧೋನಿ ರಿಲಾಕ್ಸ್ ಮೂಡ್‌ಗೆ ಜಾರಿದ್ದಾರೆ. ಸರಣಿ ಬಳಿಕ ರಾಂಚಿಯಲ್ಲಿ ಎಂಡೋರ್ಸ್‌ಮೆಂಟ್ ಸೇರಿದಂತೆ ಇತರ ಕೆಲಗಳಲ್ಲಿ ತೊಡಗಿಸಿಕೊಂಡಿದ್ದ ಧೋನಿ ಇದೀಗ ಕುಟುಂಬದ ಜೊತೆ ಶಿಮ್ಲಾ ತೆರಳಿದ್ದಾರೆ.
ಪತ್ನಿ ಸಾಕ್ಷಿ ಧೋನಿ, ಪುತ್ರಿ ಝಿವಾ ಝೋನಿ ಜೊತೆ ಎಂಎಸ್‌ಡಿ ಹಿಮಾಚಲ್ ಪ್ರದೇಶದ ಶಿಮ್ಲಾಗೆ ತೆರಳಿದ್ದಾರೆ. ಸಾಕ್ಷಿ ಧೋನಿ ಇನ್‌ಸ್ಟಾಗ್ರಾಂನಲ್ಲಿ ಕೆಲ ಫೋಟೋ ಹಾಗೂ ವೀಡಿಯೋ ಅಪ್‌ಲೋಡ್ ಮಾಡಿದ್ದಾರೆ. ಈ ಮೂಲಕ ಧೋನಿ ಕುಟುಂಬ ಶಿಮ್ಲಾದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಮಾಹಿತಿ ಬಹಿರಂಗವಾಗಿದೆ.
ಸೆಪ್ಟೆಂಬರ್ 15 ರಿಂದ ಆರಂಭಗೊಳ್ಳಲಿರುವ ಏಷ್ಯಾಕಪ್ ಟೂರ್ನಿ ವರೆಗೂ ಎಂ ಎಸ್ ಧೋನಿಗೆ ವಿಶ್ರಾಂತಿ ಸಮಯ. ಹೀಗಾಗಿ ಸಿಕ್ಕಿರೋ ಸಮಯದಲ್ಲಿ ಧೋನಿ ಹಾಗೂ ಕುಟುಂಬ ಶಿಮ್ಲಾದಲ್ಲಿ ಕಾಲ ಕಳೆಯುತ್ತಿದೆ.
