ಬಾರ್ಸಿಲೋನಾ(ಡಿ.19): ಬಾರ್ಸಿಲೋನಾ ಎಫ್‌ಸಿಯ ಸ್ಟಾರ್ ಫುಟ್ಬಾಲ್ ಆಟಗಾರ ಲಯೋನೆಲ್ ಮೆಸ್ಸಿ, ಮಂಗಳವಾರ ದಾಖಲೆಯ 5ನೇ ಬಾರಿಗೆ ‘ಯೂರೋಪಿಯನ್ ಗೋಲ್ಡನ್ ಶೂ’ ಪ್ರಶಸ್ತಿ ಜಯಿಸಿದ್ದಾರೆ. 

ಮೆಸ್ಸಿ, ಬಾರ್ಸಿಲೋನಾ ಪರ 68 ಪಂದ್ಯಗಳನ್ನಾಡಿದ್ದು, ಅದರಲ್ಲಿ 34 ಗೋಲುಗಳನ್ನು ದಾಖಲಿಸಿದ್ದಾರೆ. ಈ ಹಿಂದೆ ಮೆಸ್ಸಿ, 2009, 2011, 2012 ಮತ್ತು 2016ರಲ್ಲಿ ಪ್ರಶಸ್ತಿ ಜಯಿಸಿದ್ದರು. ಗೋಲ್ಡನ್ ಶೂ ರೇಸ್ ನಲ್ಲಿದ್ದ ಮೊಹಮದ್ ಸಲಾಹ್ ಮತ್ತು ಹ್ಯಾರಿಕೇನ್’ಗೆ ನಿರಾಸೆಯಾಗಿದೆ. 

ರಿಯಲ್ ಮ್ಯಾಡ್ರಿಡ್‌ನ ಮಾಜಿ ಆಟಗಾರ ಕ್ರಿಸ್ಟಿಯಾನೋ ರೋನಾಲ್ಡೋ ಒಟ್ಟು 4 ಬಾರಿ ಪ್ರಶಸ್ತಿ ಪಡೆದಿದ್ದಾರೆ.