ರೊಸಾರಿಯೋ(ಜು.31): ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಅರ್ಜೆಂಟೀನಾ ಸೋಲಿನ ಬಳಿಕ ಮರೆಯಾಗಿದ್ದ ಸ್ಟಾರ್ ಫುಟ್ಬಾಲ್ ಪಟು ಲಿಯೋನಲ್ ಮೆಸ್ಸಿ ಇದೀಗ ಪ್ರತ್ಯಕ್ಷವಾಗಿದ್ದಾರೆ. ಸೋಲಿನ ನೋವಿನಿಂದ ಹೊರಬಂದಿರುವ ಮೆಸ್ಸಿ, ಇದೀಗ ನಾಯಿಗೆ ಫುಟ್ಬಾಲ್ ಹೇಳಿಕೊಡೋ ಮೂಲಕ ಸುದ್ದಿಯಾಗಿದ್ದಾರೆ.

ಲಿಯೋನಲ್ ಮೆಸ್ಸಿ ತನ್ನ ಮುದ್ದಿನ ನಾಯಿಯೊಂದಿಗೆ ಫುಟ್ಬಾಲ್ ಅಭ್ಯಾಸ ಮಾಡಿದ್ದಾರೆ. ಫಿಫಾ ವಿಶ್ವಕಪ್ ಸೋಲಿನ ಬಳಿಕ ಮೈದಾನದಿಂದ ದೂರ ಉಳಿದಿದ್ದ ಮೆಸ್ಸಿ ಇದೀಗ ನಾಯಿ ಜೊತೆ  ಫುಟ್ಬಾಲ್ ಆಡಿದ್ದಾರೆ.

 

 

🦁⚽️

A post shared by AntoRoccuzzo88 (@antoroccuzzo88) on Jul 30, 2018 at 4:29am PDT

 

ಮೆಸ್ಸಿ ಫುಟ್ಬಾಲ್ ಅಭ್ಯಾಸಕ್ಕೆ ಅಭಿಮಾನಿಗಳು ಟ್ರೋಲ್ ಮಾಡಿದ್ದಾರೆ. ಮೆಸ್ಸೆ ವಿಶ್ವಕಪ್ ತಯಾರಿ ಆರಂಭಿಸಿದ್ದಾರೆ ಎಂದು ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ. ವಿಶ್ವಕಪ್ ಸೋಲಿನ ಬಳಿಕ ಮೆಸ್ಸಿ ನಾಯಿ ಜೊತೆ ಫುಟ್ಬಾಲ್ ಆಡೋ ಹಾಗಾಯ್ತು ಎಂದು ಅಭಿಮಾನಿಗಳು ಟ್ರೋಲ್ ಮಾಡಿದ್ದಾರೆ.