ಪ್ರೀಮಿಯೇರಾ ಡಿವಿಷನ್ ಫುಟ್ಬಾಲ್ ಟೂರ್ನಿಯಲ್ಲಿ ಮೆಸ್ಸಿ 43ನೇ ನಿಮಿಷದಲ್ಲಿ ಗೋಲು ದಾಖಲಿಸಿ ತಮ್ಮ ತಂಡ 1-1ರ ಸಮಬಲ ಸಾಧಿಸಲು ನೆರವಾದರು. ಇದು ತಂಡಕ್ಕಾಗಿ ಅವರು ದಾಖಲಿಸಿದ 500ನೇ ಗೋಲು.
ಸೆವಿಲ್ಲಾ(ನ.07): ಬಾರ್ಸಿಲೋನಾ ತಂಡದ ಸ್ಟಾರ್ ನಾಯಕ ಲಿಯೊನೆಲ್ ಮೆಸ್ಸಿ ತಮ್ಮ ವೃತ್ತಿಜೀವನದಲ್ಲಿ 500ನೇ ಗೋಲು ದಾಖಲಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಪ್ರೀಮಿಯೇರಾ ಡಿವಿಷನ್ ಫುಟ್ಬಾಲ್ ಟೂರ್ನಿಯ ಅಂಗವಾಗಿ ಇಲ್ಲಿನ ಎಸ್ಟಾಡಿಯೊ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಾರ್ಸಿಲೋನಾ ತಂಡ, ಸೆವಿಲ್ಲಾ ವಿರುದ್ಧ 2-1 ಗೋಲುಗಳ ಅಂತರದಲ್ಲಿ ಜಯಿಸಿತು.
ಪಂದ್ಯದ 15ನೇ ನಿಮಿಷದಲ್ಲೇ ವಿಟೊಲೊ ಅವರು ದಾಖಲಿಸಿದ ಗೋಲಿನಿಂದ 1-0 ಮುನ್ನಡೆ ಪಡೆದಿದ್ದ ಸೆವಿಲ್ಲಾಗೆ ಸಡ್ಡು ಹೊಡೆದ ಮೆಸ್ಸಿ 43ನೇ ನಿಮಿಷದಲ್ಲಿ ಗೋಲು ದಾಖಲಿಸಿ ತಮ್ಮ ತಂಡ 1-1ರ ಸಮಬಲ ಸಾಧಿಸಲು ನೆರವಾದರು. ಇದು ತಂಡಕ್ಕಾಗಿ ಅವರು ದಾಖಲಿಸಿದ 500ನೇ ಗೋಲು.
ಆನಂತರ, ಸುರೇಜ್ (61ನೇ ನಿಮಿಷ) ಗಳಿಸಿದ ಗೋಲಿನಿಂದ ಬಾರ್ಸಿಲೋನಾ ಜಯ ಕಂಡಿತು.
