ಬ್ಯುನಸ್ ಐರಿಸ್(ಆ.03): ಅರ್ಜೆಂಟೀನಾದ ಸ್ಟಾರ್ ಫುಟ್ಬಾಲ್ ಪಟು ಲಿಯೊನಲ್ ಮೆಸ್ಸಿ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೋಪಾ ಅಮೆರಿಕಾ ಟೂರ್ನಿ ವೇಳೆ ದಕ್ಷಿಣ ಅಮೆರಿಕಾ ಫುಟ್ಬಾಲ್ ಮಂಡಳಿಯನ್ನು ಕಟುವಾಗಿ ಟೀಕಿಸಿದ ಕಾರಣಕ್ಕೆ ಮೆಸ್ಸಿಗೆ 3 ತಿಂಗಳ ನಿಷೇಧ ಹೇರಲಾಗಿದೆ. 3 ತಿಂಗಳ ಕಾಲ ಮೆಸ್ಸಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವಂತಿಲ್ಲ. 

ಇದನ್ನೂ ಓದಿ: ಮೆಸ್ಸಿ ದಾಖಲೆ ಮುರಿದ ನಾಯಕ ಸುನಿಲ್ ಚೆಟ್ರಿ!

 

ಫುಟ್ಬಾಲ್ ಆಡಳಿತ ಮಂಡಳಿ ವಿರುದ್ಧ ಮೆಸ್ಸಿ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು.  ಹೀಗಾಗಿ ದಕ್ಷಿಣ ಅಮೇರಿಕಾ ಫುಟ್ಬಾಲ್ ಆಡಳಿತ ಮಂಡಳಿ ಕೆಂಗಣ್ಣಿಗೆ ಗುರಿಯಾಗಿದ್ದರು. ಕಳೆದ ಜೂನ್ ಹಾಗೂ ಜುಲೈನಲ್ಲಿ ಮೆಸ್ಸಿ, ಕೋಪಾ ಅಮೇರಿಕಾ ಟೂರ್ನಿ ಆಯೋಜನೆ ವಿರುದ್ಧ ಅಸಮಧಾನ ಹೊರಹಾಕಿದ್ದರು. 

ಇದನ್ನೂ ಓದಿ: ಪೃಥ್ವಿ ಶಾ 5 ಸೆಕೆಂಡ್ ಗಮನವಿಟ್ಟಿದ್ದರೆ ತಪ್ಪು ಆಗ್ತಿರ್ಲಿಲ್ಲ; BCCI

ಫುಟ್ಬಾಲ್ ಟೂರ್ನಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಇದಕ್ಕೆ ಅಂಪೈರ್‌ಗಳೂ ಸಾಥ್ ನೀಡುತ್ತಿದ್ದಾರೆ ಎಂದು ಮೆಸ್ಸೆ ಹೇಳಿದ್ದರು.