ಮಾಸ್ಕೋ(ಜೂ.25]: ಅರ್ಜೆಂಟೀನಾದ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಭಾನುವಾರ (ಜೂ.24) ತಮ್ಮ 31ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

ಜಗತ್ತಿನಾದ್ಯಂತ ಮೆಸ್ಸಿಗೆ ಅಭಿಮಾನಿಗಳಿದ್ದು, ಮಾಸ್ಕೋದ ಸಿಹಿ ತಿನಿಸುಗಳ ಅಂಗಡಿಯ ಮಾಲಕಿ ದಾರಿಯಾ ಮಲ್ಕಿನಾ 60 ಕೆ.ಜಿ ತೂಕದ ಮೆಸ್ಸಿಯ ಚಾಕೋಲೆಟ್ ಪ್ರತಿಮೆಯನ್ನು ನಿರ್ಮಿಸಿ ಗಮನ ಸೆಳೆದಿದ್ದಾರೆ. ಇದಕ್ಕಾಗಿ 5 ಜನರ ತಂಡ ಒಂದು ವಾರದಿಂದ ಕಾರ್ಯನಿರ್ವಹಿಸಿದೆ.

‘ಮೆಸ್ಸಿ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಬೇಕು ಎನ್ನುವ ಆಲೋಚನೆ ಬಂತು. ಮೆಸ್ಸಿಗೆ ಮೆಸ್ಸಿಯನ್ನೇ ಉಡುಗೊರೆಯಾಗಿ ನೀಡುತ್ತಿದ್ದೇವೆ’ ಎಂದು ಮಲ್ಕಿನಾ ಸಂತಸ ವ್ಯಕ್ತಪಡಿಸಿದ್ದಾರೆ. ಮಾಸ್ಕೋದಿಂದ 50 ಕಿ.ಮೀ ದೂರದಲ್ಲಿರುವ ಬ್ರೊನಿಟ್ಸ್ಕೈ ಎನ್ನುವ ಊರಿನಲ್ಲಿ ಈ ಪ್ರತಿಮೆಯನ್ನು ಪ್ರದರ್ಶನಕ್ಕೆ ಇರಿಸಲಾಗಿದೆ. ಇದೇ ಸ್ಥಳದಲ್ಲಿ ಅರ್ಜೆಂಟೀನಾ ಅಭ್ಯಾಸ ನಡೆಸುತ್ತಿದೆ.