ಓಲ್ಡ್ ಟ್ರಾಫೋರ್ಡ್(ಜು.04): ಟೀಂ ಇಂಡಿಯಾ ರಿಸ್ಟ್ ಸ್ಪಿನ್ನರ್ ಕುಲದೀಪ್ ಯಾದವ್ ಸ್ಪಿನ್ ಮೋಡಿಗೆ ಇಂಗ್ಲೆಂಡ್ ತವರಿನಲ್ಲೇ ಬೆಚ್ಚಿ ಬಿದ್ದಿದೆ. ಮೊದಲ ಟಿ20 ಪಂದ್ಯದ ಆರಂಭದಲ್ಲಿ ಅಬ್ಬರಿಸುತ್ತಿದ್ದ ಇಂಗ್ಲೆಂಡ್  ದಿಢೀರ್ ತನ್ನ ಲಯ ಕಳೆದುಕೊಂಡಿತು. ಇದಕ್ಕೆ ಕಾರಣ ಕುಲದೀಪ್ ಯಾದವ್.

ಇಂಗ್ಲೆಂಡ್ ತಂಡ ಪ್ರಮುಖ 5 ವಿಕೆಟ್ ಕಬಳಿಸಿ ದಾಖಲೆ ಬರೆದ ಕುಲದೀಪ್, ಭಾರತದ ಗೆಲುವಿನಲ್ಲೂ ಪ್ರಮುಖ ಪಾತ್ರ ನಿರ್ವಹಿಸಿದರು. ಇಂಗ್ಲೆಂಡ್ ಬೌನ್ಸಿ ಪಿಚ್‌ನಲ್ಲಿ ಕುಲದೀಪ್ ಸ್ಪಿನ್ ಮೋಡಿಗೆ ನಾಯಕ ವಿರಾಟ್ ಕೊಹ್ಲಿ ಕೂಡ ಬೋಲ್ಡ್ ಆಗಿದ್ದಾರೆ.

ಕುಲದೀಪ್ ಯಾದವ್ ಟೀಂ ಇಂಡಿಯಾದ ಪ್ರಮುಖ ಅಸ್ತ್ರ ಎಂದು ನಾಯಕ ಕೊಹ್ಲಿ ಪ್ರಶಂಸಿದ್ದಾರೆ. 24 ರನ್ ನೀಡಿ 5 ವಿಕೆಟ್ ಕಬಳಿಸಿದ ಕುಲದೀಪ್ ಇಂಗ್ಲೆಂಡ್ ಬ್ಯಾಟಿಂಗ್ ವಿಭಾಗವನ್ನೇ ಛಿದ್ರಗೊಳಿಸಿದ್ದರು. ಇಂಗ್ಲೆಂಡ್ ಪ್ರವಾಸದ ಮುಂದಿನ ಎಲ್ಲಾ ಪಂದ್ಯಗಳಲ್ಲೂ ಕುಲದೀಪ್ ಪ್ರಮುಖ ಪಾತ್ರನಿರ್ವಹಿಸಲಿದ್ದಾರೆ ಎಂದು ಕೊಹ್ಲಿ ಹೇಳಿದ್ದಾರೆ.