ಮುಂಬೈ(ಏ.19): ಐಸಿಸಿ ಏಕದಿನ ವಿಶ್ವಕಪ್‌ಗೆ ತಂಡ ಪ್ರಕಟಗೊಂಡ ಕೆಲವೇ ದಿನಗಳ ಬಳಿಕ ಭಾರತ ತಂಡದ ಪ್ರಧಾನ ಕೋಚ್‌ ರವಿಶಾಸ್ತ್ರಿ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. 

ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ಪ್ರಕಟ; ಕನ್ನಡಿಗನಿಗೆ ಚಾನ್ಸ್

ದುಬೈನಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶಾಸ್ತ್ರಿ, ‘ತಂಡದ ಆಯ್ಕೆಯಲ್ಲಿ ನಾನು ತಲೆಹಾಕುವುದಿಲ್ಲ. ಯಾವುದಾದರೂ ಅಭಿಪ್ರಾಯಗಳಿದ್ದರೆ ನಾಯಕ ಕೊಹ್ಲಿಗೆ ತಿಳಿಸುತ್ತೇನೆ’ ಎಂದಿದ್ದಾರೆ. ಇನ್ನು, ವಿಶ್ವಕಪ್‌ಗೆ 15ರ ಬದಲು 16 ಸದಸ್ಯರನ್ನು ಆಯ್ಕೆ ಮಾಡಲು ಶಾಸ್ತ್ರಿ ಐಸಿಸಿ ಬಳಿ ಅನುಮತಿ ಕೇಳಿದ್ದರಂತೆ. ಆದರೆ ನಿಯಮದ ಪ್ರಕಾರ ಕೇವಲ 15 ಆಟಗಾರರನ್ನು ಮಾತ್ರ ಆಯ್ಕೆ ಮಾಡಬೇಕು ಎಂದು ಐಸಿಸಿ ಸೂಚಿಸಿತು ಎಂದು ಶಾಸ್ತ್ರಿ ಹೇಳಿದ್ದಾರೆ. ಎರಡು ತಿಂಗಳ ಸುದೀರ್ಘ ಟೂರ್ನಿಯಲ್ಲಿ ಒಬ್ಬ ಹೆಚ್ಚುವರಿ ಆಟಗಾರನಿದ್ದರೆ ಉತ್ತಮ ಎನ್ನುವ ಪ್ರಸ್ತಾಪವನ್ನು ಶಾಸ್ತ್ರಿ, ಐಸಿಸಿ ಮುಂದಿಟ್ಟಿದ್ದರು.

ವಿಶ್ವಕಪ್ 2019: ಇವರಲ್ಲಿ ಯಾರಾಗಬಹುದು ಮ್ಯಾಚ್ ವಿನ್ನರ್ಸ್?

2019ರ ಏಕದಿನ ವಿಶ್ವಕಪ್ ಟೂರ್ನಿಯು ಮೇ 30ರಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಆತಿಥ್ಯ ವಹಿಸಿರುವ ಇಂಗ್ಲೆಂಡ್ ತಂಡವು ದಕ್ಷಿಣ ಆಫ್ರಿಕಾ ಎದುರು ಸೆಣಸಲಿದೆ. 10 ತಂಡಗಳು ಪ್ರಶಸ್ತಿಗಾಗಿ ಕಾದಾಡಲಿದ್ದು, ಭಾರತ ಜೂನ್ 05ರಂದು ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯವನ್ನಾಡಲಿದೆ. ಇನ್ನು ಪಾಕಿಸ್ತಾನ ವಿರುದ್ಧ ಜೂನ್ 16ರಂದು ಭಾರತ ಕಾದಾಡಲಿದೆ.  

ವಿಶ್ವಕಪ್ ಟೂರ್ನಿಗೆ ಸೆಹ್ವಾಗ್ ಕನಸಿನ ತಂಡ ಪ್ರಕಟ