Asianet Suvarna News Asianet Suvarna News

ಕೊಹ್ಲಿ ನೋಡಿ ಕಲಿಯಿರಿ-ಪಾಕ್ ಕ್ರಿಕೆಟಿಗರಿಗೆ ಜಾವೆದ್ ಸಲಹೆ!

ಬ್ಯಾಟಿಂಗ್ ವಿಚಾರದಲ್ಲಿ  ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎಲ್ಲರಿಗೂ ಮಾದರಿ. ರನ್ ಹೇಗೆ ಗಳಿಸಬೇಕು, ಬೌಲರ್‌ಗಳನ್ನ ಎದುರಿಸುವ ರೀತಿ ಎಲ್ಲವೂ ಪರ್ಫೆಕ್ಟ್. ಹೀಗಾಗಿಯೇ ಪಾಕಿಸ್ತಾನ ಬ್ಯಾಟ್ಸ್‌ಮನ್‌ಗಳು ವಿರಾಟ್ ಕೊಹ್ಲಿಯನ್ನ ನೋಡಿ ಕಲಿಬೇಕು ಎಂದು ಪಾಕ್ ಮಾಜಿ ಕ್ರಿಕೆಟಿಗ ಸಲಹೆ ನೀಡಿದ್ದಾರೆ.

Learn from Virat kohli Pakistan former batsman Javed miandad suggest to team
Author
Bengaluru, First Published Dec 18, 2018, 3:28 PM IST

ಕರಾಚಿ(ಡಿ.18): ಪಾಕಿಸ್ತಾನ ಕ್ರಿಕೆಟ್ ತಂಡ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡುತ್ತಿಲ್ಲ. ಟೆಸ್ಟ್ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ತಂಡ ತವರಿನಲ್ಲೇ ಸೋಲು ಕಾಣುತ್ತಿದೆ. ಬ್ಯಾಟ್ಸ್‌ಮನ್‌ಗಳು ರನ್‌ಗಳಿಸುವಲ್ಲಿ ವಿಫಲರಾಗುತ್ತಿದ್ದಾರೆ. ಪಾಕಿಸ್ತಾನ ಬ್ಯಾಟ್ಸ್‌ಮನ್‌ಗಳು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನ ನೋಡಿ ಕಲಿಯಬೇಕು ಎಂದು ಪಾಕ್ ಮಾಜಿ ಕ್ರಿಕೆಟಿಗ ಜಾವೇದ್ ಮಿಯಾಂದಾದ್ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಐಪಿಎಲ್ ಹರಾಜು 2019: ಅಂತಿಮ ಕ್ಷಣದಲ್ಲಿ ಮತ್ತೊಬ್ಬನ ಸೇರ್ಪಡೆ

ನ್ಯೂಜಿಲೆಂಡ್ ವಿರುದ್ಧದ ತವರಿನ ಸರಣಿಯಲ್ಲಿ ಪಾಕಿಸ್ತಾನ ಮುಗ್ಗರಿಸಿದೆ. ಪಾಕ್ ಬ್ಯಾಟ್ಸ್‌ಮನ್‌ಗಳು ವಿರಾಟ್ ಕೊಹ್ಲಿ, ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಇಂಗ್ಲೆಂಡ್ ನಾಯಕ ಜೋ ರೂಟ್ ಅವರಿಂದ ಕಲಿಯಲು ಸಾಕಷ್ಟಿದೆ ಎಂದು ಮಿಯಾಂದಾದ್ ಹೇಳಿದ್ದಾರೆ.

ಇದನ್ನೂ ಓದಿ:  #IPLAuction2019 ಹರಾಜಿನಲ್ಲಿ ಯಾವ ಕ್ರಿಕೆಟಿಗ ಯಾವ ತಂಡಕ್ಕೆ..?

ಪಾಕ್ ಬ್ಯಾಟ್ಸ್‌ಮನ್‌ಗಳು ಟೆಕ್ನಿಕ್ ಸರಿಯಾಗಿಲ್ಲ. ಬೌಲರ್‌ಗಳನ್ನ ಎದುರಿಸುವ ರೀತಿ, ಶಾಟ್ ಸೆಲೆಕ್ಷನ್ ಸೇರಿದಂತೆ ಹಲವು ವಿಚಾರಗಳನ್ನ ಪಾಕ್ ಬ್ಯಾಟ್ಸ್‌ಮನ್‌ಗಳು ಕಲಿಯಬೇಕು ಎಂದಿದ್ದಾರೆ. 2019ರ ವಿಶ್ವಕಪ್ ಹಾಗೂ ಪ್ರಮುಖ ಸರಣಿಗಳು ಪಾಕಿಸ್ತಾನದ ಮುಂದಿದೆ. ಹೀಗಾಗಿ ಪಾಕ್ ತಂಡದ ಎಲ್ಲಾ ಸರಣಿಗಳನ್ನ ಗಂಭೀರವಾಗಿ ಪರಿಗಣಿಸಬೇಕು ಎಂದಿದ್ದಾರೆ.
ಇದನ್ನೂ ಓದಿ:ಐಪಿಎಲ್ ಹರಾಜಿಗೂ ಮೊದಲೇ ಮುಂಬೈ ಪಾಲಾದ ಜಹೀರ್ ಖಾನ್!

Follow Us:
Download App:
  • android
  • ios