ಫಖರ್ ಜಮಾನ್ ಪಾಕಿಸ್ತಾನದ ಅದ್ಭುತ ಇನ್ನಿಂಗ್ಸ್ ಕಟ್ಟುತ್ತಿದ್ದು, ಕಳೆದ ನಾಲ್ಕು ಪಂದ್ಯಗಳಲ್ಲಿ ಕ್ರಮವಾಗಿ 85, 210*, 43* ಹಾಗೂ 117 ರನ್ ಸಿಡಿಸಿ ಮಿಂಚಿದ್ದಾರೆ
ನವದೆಹಲಿ(ಆ.25): ಭಾರತ ತಂಡದ ರನ್ ಮಷಿನ್ ವಿರಾಟ್ ಕೊಹ್ಲಿ ವಿಶ್ವದ ಅನೇಕ ಯುವ ಕ್ರಿಕೆಟಿಗರಿಗೆ ಸ್ಫೂರ್ತಿಯಾಗಿದ್ದಾರೆ. ಕೊಹ್ಲಿ ಆಟ ಸಾಕಷ್ಟು ಕಲಿತಿದ್ದೇನೆ ಎಂದು ಪಾಕಿಸ್ತಾನದ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್ ಫಖರ್ ಜಮಾನ್ ಹೇಳಿದ್ದಾರೆ.
ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಅಮೋಘ ಪ್ರದರ್ಶನ ತೋರುತ್ತಿರುವ ಕೊಹ್ಲಿಯನ್ನು ಫಖರ್ ಕೊಂಡಾಡಿದ್ದಾರೆ. ‘ವಿರಾಟ್ ವಿಶ್ವ ಶ್ರೇಷ್ಠ ಆಟಗಾರ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಅವರ ಪರಿಶ್ರಮ ಹಾಗೂ ಬ್ಯಾಟಿಂಗ್ ಶೈಲಿ ನನ್ನಂತಹ ಅನೇಕರಿಗೆ ಸ್ಫೂರ್ತಿಯಾಗಿದೆ. ಕೊಹ್ಲಿಯನ್ನು ನೋಡಿ ಸಾಕಷ್ಟು ಕಲಿತಿದ್ದೇನೆ. ಅವರ ಆಟ ನೋಡುವುದೇ ಖುಷಿಯ ವಿಚಾರ’ ಎಂದು ಫಖರ್ ಹೇಳಿದ್ದಾರೆ.
ಫಖರ್ ಜಮಾನ್ ಪಾಕಿಸ್ತಾನದ ಅದ್ಭುತ ಇನ್ನಿಂಗ್ಸ್ ಕಟ್ಟುತ್ತಿದ್ದು, ಕಳೆದ ನಾಲ್ಕು ಪಂದ್ಯಗಳಲ್ಲಿ ಕ್ರಮವಾಗಿ 85, 210*, 43* ಹಾಗೂ 117 ರನ್ ಸಿಡಿಸಿ ಮಿಂಚಿದ್ದಾರೆ