ಲಿಯಾಂಡರ್ ಪೇಸ್'ಗೆ ಇದು ಈ ಸೀಸನ್'ನ ಮೊದಲ ಪ್ರಶಸ್ತಿಯಾಗಿದೆ. ಜೊತೆಗೆ ಇದು ಅವರ 20ನೇ ಎಟಿಪಿ ಚಾಲೆಂಜರ್ ಟೈಟಲ್ ಆಗಿದೆ.

ಮೆಕ್ಸಿಕೋ(ಏ. 02): ಭಾರತದ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ತಮ್ಮ 44ನೇ ವಯಸ್ಸಿನಲ್ಲೂ ಟೂರ್ನಿಗಳನ್ನು ಗೆಲ್ಲುವ ಶಕ್ತಿ ಉಳಿಸಿಕೊಂಡಿದ್ದಾರೆ. 43 ವರ್ಷದ ಪೇಸ್ ಅವರು ಲಿಯೋನ್ ಚಾಲೆಂಜರ್ ಟೂರ್ನಿಯ ಪುರುಷರ ಡಬಲ್ಸ್ ಪ್ರಶಸ್ತಿ ಜಯಿಸಿದ್ದಾರೆ. ಇಂದು ನಡೆದ 75 ಸಾವಿರ ಡಾಲರ್ ಮೊತ್ತದ ಟೂರ್ನಿಯ ಡಬಲ್ಸ್ ಫೈನಲ್'ನಲ್ಲಿ ಲಿಯಾಂಡರ್ ಪೇಸ್ ಮತ್ತು ಕೆನಡಾದ ಅದಿಲ್ ಶಮ್ಸದಿನ್ ಜೋಡಿ 6-1, 6-4 ನೇರ ಸೆಟ್'ಗಳಿಂದ ಸ್ವಿಜರ್'ಲೆಂಡ್'ನ ಲೂಕಾ ಮಾರ್ಗರೋಲಿ ಮತ್ತು ಬ್ರೆಜಿಲ್'ನ ಕಾರೋ ಜಂಪಿಯೆರಿ ಜೋಡಿಯನ್ನು ಸೋಲಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಲಿಯಾಂಡರ್ ಪೇಸ್'ಗೆ ಇದು ಈ ಸೀಸನ್'ನ ಮೊದಲ ಪ್ರಶಸ್ತಿಯಾಗಿದೆ. ಜೊತೆಗೆ ಇದು ಅವರ 20ನೇ ಎಟಿಪಿ ಚಾಲೆಂಜರ್ ಟೈಟಲ್ ಆಗಿದೆ. ಕಳೆದ 26 ವರ್ಷಗಳಿಂದ ಪೇಸ್ ಅವರು ಪ್ರತೀ ವರ್ಷ ಒಂದಾದರೂ ಪ್ರಶಸ್ತಿ ಗೆಲ್ಲುತ್ತಾ ಬಂದಿರುವುದು ಅವರ ಸ್ಥಿರ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ.