ದಿಗ್ಗಜ ಲಿಯಾಂಡರ್ ಪೇಸ್ ತಂಡಕ್ಕೆ ವಾಪಸಾಗಿದ್ದಾರೆ. ಕಳೆದ ಏಪ್ರಿಲ್‌ನಲ್ಲಿ ಉಜ್ಬೇಕಿಸ್ತಾನ ವಿರುದ್ಧ ನಡೆದಿದ್ದ ಪಂದಕ್ಕೆ ಪೇಸ್‌'ರನ್ನು ತಂಡದಿಂದ ಕೈಬಿಡಲಾಗಿತ್ತು.

ನವದೆಹಲಿ(ಮಾ.12): ಚೀನಾ ವಿರುದ್ಧ ಡೇವಿಸ್ ಕಪ್ ಟೆನಿಸ್ ಪಂದ್ಯಕ್ಕೆ ಭಾರತ ತಂಡ ಪ್ರಕಟಗೊಂಡಿದೆ. ಏ.6-7ಕ್ಕೆ ತೈನ್ಜಿನ್‌'ನಲ್ಲಿ ಏಷ್ಯಾ-ಓಶಿಯಾನಿಯ ಗುಂಪು 1 ಹಂತದ ಪಂದ್ಯ ನಡೆಯಲಿದ್ದು, 5 ಸದಸ್ಯರ ಬಲಿಷ್ಠ ತಂಡವನ್ನು ಅಖಿಲ ಭಾರತ ಟೆನಿಸ್ ಸಂಸ್ಥೆ ಆಯ್ಕೆ ಮಾಡಿದೆ.

ದಿಗ್ಗಜ ಲಿಯಾಂಡರ್ ಪೇಸ್ ತಂಡಕ್ಕೆ ವಾಪಸಾಗಿದ್ದಾರೆ. ಕಳೆದ ಏಪ್ರಿಲ್‌ನಲ್ಲಿ ಉಜ್ಬೇಕಿಸ್ತಾನ ವಿರುದ್ಧ ನಡೆದಿದ್ದ ಪಂದಕ್ಕೆ ಪೇಸ್‌'ರನ್ನು ತಂಡದಿಂದ ಕೈಬಿಡಲಾಗಿತ್ತು. ಜತೆಗೆ ಮನಸ್ತಾಪದ ಹೊರತಾಗಿಯೂ ರೋಹನ್ ಬೋಪಣ್ಣ, ಪೇಸ್ ಜತೆಯೇ ಡಬಲ್ಸ್ ಆಡಬೇಕು ಎಂದು ಎಐಟಿಎ ತಿಳಿಸಿದೆ ಎನ್ನಲಾಗಿದೆ.

ತಂಡ: ಯೂಕಿ ಭಾಂಭ್ರಿ, ರಾಮ್‌ಕುಮಾರ್, ಸುಮಿತ್, ಲಿಯಾಂಡರ್ ಪೇಸ್, ರೋಹನ್ ಬೋಪಣ್ಣ.