ಕಳೆದ ಆಗಸ್ಟ್‌'ನಿಂದ ಪೇಸ್ ಮತ್ತು ರಾಜಾ ಡಬಲ್ಸ್‌'ನಲ್ಲಿ ಜೋಡಿಯಾಗಿದ್ದಾರೆ. ಯುಎಸ್ ಓಪನ್ ಸೇರಿದಂತೆ ಒಟ್ಟು 8 ಟೂರ್ನಿಯಲ್ಲಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ನವದೆಹಲಿ(ನ.13): ಭಾರತದ ಅನುಭವಿ ಟೆನಿಸಿಗ ಲಿಯಾಂಡರ್ ಪೇಸ್ ಮತ್ತು ಪೂರವ್ ರಾಜಾ ಜೋಡಿ ಇದೇ ಮೊದಲ ಬಾರಿಗೆ ಚೊಚ್ಚಲ ಪ್ರಶಸ್ತಿ ಎತ್ತಿ ಹಿಡಿದಿದ್ದಾರೆ.

ರೋಚಕ ಕಾದಾಟದಿಂದ ಕೂಡಿದ್ದ ಪಂದ್ಯದಲ್ಲಿ ನಾಕ್ಸ್‌'ವಿಲ್ಲೆ ಚಾಲೆಂಜರ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ನಾಕ್ಸ್‌'ವಿಲ್ಲೆ ಚಾಲೆಂಜರ್ ಫೈನಲ್ ಪಂದ್ಯದಲ್ಲಿ ಪೇಸ್, ರಾಜಾ ಜೋಡಿ 7-6(4), 7-6(4) ಸೆಟ್‌'ಗಳಿಂದ ಅಮೆರಿಕದ ಜೇಮ್ಸ್ ಸೆರೆಟಾನಿ ಮತ್ತು ಆಸ್ಟ್ರೇಲಿಯಾದ ಜಾನ್ ಪ್ಯಾಟ್ರಿಕ್ ಸ್ಮಿತ್ ಜೋಡಿ ಎದುರು ರೋಚಕ ಜಯ ಸಾಧಿಸಿತು. ಈ ಮೂಲಕ ಪೇಸ್-ರಾಜಾ ಜೋಡಿ 75000 ಯುಎಸ್ ಡಾಲರ್ ಮೊತ್ತದ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಕಳೆದ ಆಗಸ್ಟ್‌'ನಿಂದ ಪೇಸ್ ಮತ್ತು ರಾಜಾ ಡಬಲ್ಸ್‌'ನಲ್ಲಿ ಜೋಡಿಯಾಗಿದ್ದಾರೆ. ಯುಎಸ್ ಓಪನ್ ಸೇರಿದಂತೆ ಒಟ್ಟು 8 ಟೂರ್ನಿಯಲ್ಲಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.