2017ರಲ್ಲಿ ಪೇಸ್-ಶಂಸುದ್ದೀನ್ ಜೋಡಿ 2 ಚಾಲೆಂಜರ್ಸ್ ಟ್ರೋಫಿಗಳನ್ನು ಗೆದ್ದುಕೊಂಡಿದೆ.

ಲಂಡನ್(ಜು.06): ಮಾಜಿ ಚಾಂಪಿಯನ್ ಭಾರತದ ಲಿಯಾಂಡರ್ ಪೇಸ್ ಹಾಗೂ ಅವರ ಜೊತೆಗಾರ ಕೆನಡಾದ ಆದಿಲ್ ಶಂಸುದ್ದೀನ್ ಪುರುಷರ ಡಬಲ್ಸ್‌ನ ಮೊದಲ ಸುತ್ತಿನಲ್ಲೇ ಸೋಲು ಅನುಭವಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಂದು ನಡೆದ ಪಂದ್ಯದಲ್ಲಿ ಪೇಸ್ ಜೋಡಿ, ಆಸ್ಟ್ರಿಯಾದ ಜ್ಯೂಲಿಯನ್ ನೋಲ್ ಹಾಗೂ ಫಿಲಿಪ್ ಒಸ್ವಾಲ್ಡ್ ವಿರುದ್ಧ 2-3 ಸೆಟ್‌'ಗಳ ಅಂತರದಲ್ಲಿ ಪರಾಭವಗೊಂಡಿತು.

ಪೇಸ್ ಹಾಗೂ ಶಮ್ಸದ್ದೀನ್ ಉತ್ತಮ ಆರಂಭ ಪಡೆದುಕೊಂಡರು. 6-4, 6-4 ಅಂತರದಲ್ಲಿ ಮೊದಲೆರೆಡು ಸೆಟ್ ಗೆದ್ದ ಜೋಡಿ ಕೊನೆ ಮೂರು ಸೆಟ್‌'ಗಳನ್ನು ಕೈಚೆಲ್ಲಿತು. 6-2, 7-6(7-2) ಹಾಗೂ 10-08 ಗೇಮ್‌'ಗಳ ಅಂತರದಲ್ಲಿ ಆಸ್ಟ್ರಿಯಾ ಜೋಡಿ ಅಂತಿಮ ಮೂರು ಸೆಟ್ ಗೆದ್ದುಕೊಂಡು ಪಂದ್ಯವನ್ನು ತನ್ನದಾಗಿಸಿಕೊಂಡಿತು.

ಕೊನೆಯ ಸೆಟ್‌'ನಲ್ಲಿ 8-8ರ ಸಮಬಲ ಸಾಧಿಸಿದ್ದ ಪೇಸ್ ಜೋಡಿ, ಕೊನೆ 2 ಗೇಮ್‌'ಗಳನ್ನು ಗೆಲ್ಲುವಲ್ಲಿ ವಿಫಲವಾಯಿತು.

1999ರಲ್ಲಿ ಪುರುಷರ ಡಬಲ್ಸ್ ಪ್ರಶಸ್ತಿ ಗೆದ್ದಿದ್ದ ಪೇಸ್ ಆನಂತರ ಮತ್ತೊಮ್ಮೆ ಈ ವಿಭಾಗದಲ್ಲಿ ಚಾಂಪಿಯನ್ ಆಗಿಲ್ಲ. ಆದರೆ ಮಿಶ್ರ ಡಬಲ್ಸ್‌ನಲ್ಲಿ 4 ಬಾರಿ ಚಾಂಪಿಯನ್ ಆಗಿರುವ ಪೇಸ್, ಈ ಬಾರಿ ಚೀನಾದ ಕ್ಸು ಯಿಫಾನ್ ಜೊತೆ ಕಣಕ್ಕಿಳಿಯಲಿದ್ದಾರೆ.

2017ರಲ್ಲಿ ಪೇಸ್-ಶಂಸುದ್ದೀನ್ ಜೋಡಿ 2 ಚಾಲೆಂಜರ್ಸ್ ಟ್ರೋಫಿಗಳನ್ನು ಗೆದ್ದುಕೊಂಡಿದೆ.