ಏಕದಿನ ವಿಶ್ವಕಪ್‌ಗೆ ಆಯ್ಕೆಯಾಗುವ ಸಲುವಾಗಿ ಮಾಲಿಂಗ ಮೊದಲ 6 ಐಪಿಎಲ್ ಪಂದ್ಯಗಳಿಗೆ ಗೈರಾಗುವುದಾಗಿ ತಿಳಿಸಿದ್ದಾರೆ. ಇದೀಗ ನಿವೃತ್ತಿಯ ಬಗ್ಗೆ ತುಟಿ ಬಿಚ್ಚಿದ್ದಾರೆ.
ಸೆಂಚೂರಿಯನ್(ಮಾ.24]: ಶ್ರೀಲಂಕಾದ ಸೀಮಿತ ಓವರ್ ಕ್ರಿಕೆಟ್ ತಂಡದ ನಾಯಕ ಲಸಿತ್ ಮಾಲಿಂಗ ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಲಸಿತ್ ಮಾಲಿಂಗ ವಿದಾಯ ಘೋಷಿಸಲಿದ್ದಾರೆ.
#IPL ಜೋಶ್: ಪರ್ಪಲ್ ಕ್ಯಾಪ್ ವಿಜೇತ ಬೌಲರ್’ಗಳಿವರು
ಈ ವರ್ಷ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಬಳಿಕ 50 ಓವರ್ ಕ್ರಿಕೆಟ್‌ನಿಂದ ನಿವೃತ್ತಿ ಪಡೆಯುವ ಯೋಚನೆ ಇದೆ ಎಂದಿರುವ ಮಾಲಿಂಗ, ಆಸ್ಪ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಬಳಿಕ 20 ಓವರ್ ಮಾದರಿಗೂ ವಿದಾಯ ಹೇಳುವುದಾಗಿ ಘೋಷಿಸಿದ್ದಾರೆ.
ನಿವೃತ್ತಿ ಸುಳಿವು ನೀಡಿದ ಲಸಿತ್ ಮಾಲಿಂಗ
ಏಕದಿನ ವಿಶ್ವಕಪ್‌ಗೆ ಆಯ್ಕೆಯಾಗುವ ಸಲುವಾಗಿ ಮಾಲಿಂಗ ಮೊದಲ 6 ಐಪಿಎಲ್ ಪಂದ್ಯಗಳಿಗೆ ಗೈರಾಗುವುದಾಗಿ ತಿಳಿಸಿದ್ದಾರೆ. ವಿಶ್ವಕಪ್ ತಂಡದಲ್ಲಿ ಸ್ಥಾನ ಬೇಕಿದ್ದರೆ ಎಲ್ಲಾ ಆಟಗಾರರು ದೇಸಿ ಏಕದಿನ ಟೂರ್ನಿಯಲ್ಲಿ ಆಡಬೇಕು ಎಂದು ಲಂಕಾ ಕ್ರಿಕೆಟ್ ಮಂಡಳಿ ಆದೇಶಿಸಿದೆ.
