ಅನ್'ಸೋಲ್ಡ್ ಆಗಿದ್ದ ಮಾಲಿಂಗ ಮತ್ತೆ ಮುಂಬೈ ಇಂಡಿಯನ್ಸ್ ಬಳಗಕ್ಕೆ..! ಆದರೆ..?

First Published 8, Feb 2018, 6:01 PM IST
Lasith Malinga roped in by the Mumbai Indians franchise
Highlights

ಐಪಿಎಲ್'ನಲ್ಲಿ ಮುಂಬೈ ಇಂಡಿಯನ್ಸ್ ಪರ 110 ಪಂದ್ಯಗಳನ್ನಾಡಿರುವ ಮಾಲಿಂಗ 154 ವಿಕೆಟ್ ಕಬಳಿಸಿದ್ದಾರೆ. ಜತೆಗೆ ಮುಂಬೈ ತಂಡ ಮೂರು ಬಾರಿ ಚಾಂಪಿಯನ್ ಪಟ್ಟಕ್ಕೇರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಮುಂಬೈ(ಫೆ.08): 2018ರ ಐಪಿಎಲ್ ಆಟಗಾರರ ಹರಾಜಿನಲ್ಲಿ ಬಿಕರಿಯಾಗದೇ ಉಳಿದಿದ್ದ ಶ್ರೀಲಂಕಾದ ವೇಗಿ ಲಸಿತ್ ಮಾಲಿಂಗ ಅವರನ್ನು ಮುಂಬೈ ಇಂಡಿಯನ್ಸ್ ತಂಡ ಬೌಲಿಂಗ್ ಸಲಹೆಗಾರರನ್ನಾಗಿ ನೇಮಕ ಮಾಡಿಕೊಂಡಿದೆ.

ಮುಂಬೈ ಇಂಡಿಯನ್ಸ್ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದ ಹರ್ಭಜನ್ ಸಿಂಗ್ ಹಾಗೂ ಲಸಿತ್ ಮಾಲಿಂಗ ಅವರನ್ನು ಮುಂಬೈ ಪ್ರಾಂಚೈಸಿ ಈ ಬಾರಿ ಹರಾಜಿನಿಂದ ಕೈಬಿಟ್ಟಿತ್ತು. ಆದರೆ ಭಜ್ಜಿಯನ್ನು ಸಿಎಸ್'ಕೆ ಖರೀದಿಸಿತ್ತು. ಇದೀಗ ಮುಂಬರುವ ಐಪಿಎಲ್ ಆವೃತ್ತಿಯಲ್ಲಿ ಮಾಲಿಂಗ ಅವರನ್ನು ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ಸಲಹೆಗಾರರನ್ನಾಗಿ ಆರಿಸಿಕೊಂಡಿದೆ.

ಐಪಿಎಲ್'ನಲ್ಲಿ ಮುಂಬೈ ಇಂಡಿಯನ್ಸ್ ಪರ 110 ಪಂದ್ಯಗಳನ್ನಾಡಿರುವ ಮಾಲಿಂಗ 154 ವಿಕೆಟ್ ಕಬಳಿಸಿದ್ದಾರೆ. ಜತೆಗೆ ಮುಂಬೈ ತಂಡ ಮೂರು ಬಾರಿ ಚಾಂಪಿಯನ್ ಪಟ್ಟಕ್ಕೇರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೀಗ ಮುಂಬೈನ ತಾರಾ ಕೋಚಿಂಗ್ ಬಳಗವನ್ನು ಕೂಡಿಕೊಂಡಿರುವ ಮಾಲಿಂಗ, ಜಯವರ್ಧನೆ(ಮುಖ್ಯ ಕೋಚ್), ಶೇನ್ ಬಾಂಡ್(ಬೌಲಿಂಗ್), ರಾಬಿನ್ ಸಿಂಗ್(ಬ್ಯಾಟಿಂಗ್), ಜೇಮ್ಸ್ ಪೆಮ್ಮೆಂಟ್(ಫೀಲ್ಡಿಂಗ್) ಕೋಚ್'ಗಳೊಂದಿಗೆ ಕಾರ್ಯ ನಿರ್ವಹಿಸಲಿದ್ದಾರೆ.    

loader