ಭಾರತ ಹಾಗೂ ಲಂಕಾ ಆಟಗಾರರು ಔತಣಕೂಟದಲ್ಲಿ ಒಟ್ಟಿಗೆ ಕೆಲ ಬಾಲಿವುಡ್ ಗೀತೆಗಳನ್ನೂ ಹಾಡಿದ್ದಾರೆ ಎನ್ನಲಾಗಿದೆ.
ಕೊಲಂಬೊ(ಸೆ.02): 5ನೇ ಏಕದಿನ ಪಂದ್ಯಕ್ಕೂ ಮುನ್ನ ಕೊಲಂಬೊದ ತಮ್ಮ ನಿವಾಸದಲ್ಲಿ ಶ್ರೀಲಂಕಾ ವೇಗಿ ಭಾರತೀಯ ಆಟಗಾರರಿಗೆ ಔತಣಕೂಟ ಏರ್ಪಡಿಸಿದ್ದರು.
ನಾಲ್ಕನೇ ಪಂದ್ಯದಲ್ಲಿ ನಾಯಕತ್ವ ವಹಿಸಿದ್ದ ಮಾಲಿಂಗ, ಅಂತಾರಾಷ್ಟ್ರೀಯ ಕ್ರಿಕೆಟ್'ನಲ್ಲಿ ಮುಂದುವರಿಯುವ ಬಗ್ಗೆ ಭಾರತ ವಿರುದ್ಧ ಸರಣಿ ಮುಕ್ತಾಯಗೊಂಡ ಬಳಿಕ ಪರಿಶೀಲಿಸುವುದಾಗಿ ಹೇಳಿ, ನಿವೃತ್ತಿ ಸೂಚನೆ ನೀಡಿದ್ದರು.
ಐಪಿಎಲ್'ನಲ್ಲಿ ಶ್ರೀಲಂಕಾದ ಹಲವು ಆಟಗಾರರು ಪಾಲ್ಗೊಳ್ಳುವುದರಿಂದ ಉಭಯ ದೇಶಗಳ ಆಟಗಾರರ ನಡುವೆ ಸ್ನೇಹವಿದೆ. ಭಾರತದ ಕೆಲ ಆಟಗಾರರು ಫೋಟೋಗಳನ್ನು ಸಾಮಾಜಿಕ ತಾಣದಲ್ಲಿ ಹಾಕಿದ್ದಾರೆ.
ಭಾರತ ಹಾಗೂ ಲಂಕಾ ಆಟಗಾರರು ಔತಣಕೂಟದಲ್ಲಿ ಒಟ್ಟಿಗೆ ಕೆಲ ಬಾಲಿವುಡ್ ಗೀತೆಗಳನ್ನೂ ಹಾಡಿದ್ದಾರೆ ಎನ್ನಲಾಗಿದೆ.
