ಕೋವಿಡ್ ಕಾರಣದಿಂದಾಗಿ ಏಷ್ಯನ್ ಗೇಮ್ಸ್ ಮುಂದೂಡಿಕೆ!
- ಚೀನಾದಲ್ಲಿ ಕೋವಿಡ್ ಪ್ರಕರಣ ಹೆಚ್ಚಳ ಹಿನ್ನೆಲೆ
- ಸೆಪ್ಟೆಂಬರಲ್ಲಿ ನಡೆಯಬೇಕಿದ್ದ ಕ್ರೀಡಾಕೂಟ ಅನಿರ್ದಿಷ್ಟಾವಧಿ ಮುಂದಕ್ಕೆ
- ಭಾರತದ ಕ್ರೀಡಾಪಟುಗಳ ಮಿಶ್ರ ಪ್ರತಿಕ್ರಿಯೆ
ತಾಶ್ಕೆಂಟ್/ಬೀಜಿಂಗ್ (ಮೇ.7): ಚೀನಾದಲ್ಲಿ (China) ಕೊರೋನಾ (Coronavirus)ಸೋಂಕಿನ ಪ್ರಕರಣಗಳು ದಿನೇದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಈ ವರ್ಷ ಸೆಪ್ಟೆಂಬರ್ 10ರಿಂದ 25ರ ವರೆಗೂ ಹಾಂಗ್ಝೂನಲ್ಲಿ (Hangzhou Asian Games) ನಡೆಯಬೇಕಿದ್ದ ಏಷ್ಯನ್ ಗೇಮ್ಸ್ ಅನ್ನು ಅನಿರ್ದಿಷ್ಟಾವಧಿ ಮುಂದೂಡಲಾಗಿದೆ.
ಶುಕ್ರವಾರ ಉಜ್ಬೇಕಿಸ್ತಾನದ (Uzbekistan) ತಾಶ್ಕೆಂಟ್‌ನಲ್ಲಿ(Tashkent) ನಡೆದ ಏಷ್ಯಾ ಒಲಿಂಪಿಕ್ ಸಮಿತಿ(ಒಸಿಎ) ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ನಿರ್ಧರಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಪರಿಸ್ಥಿತಿ ಅವಲೋಕಿಸಿ ಹೊಸ ದಿನಾಂಕಗಳನ್ನು ಪ್ರಕಟ ಮಾಡುವುದಾಗಿ ಒಸಿಎ ತಿಳಿಸಿದೆ.
19ನೇ ಆವೃತ್ತಿಯ ಏಷ್ಯನ್ ಗೇಮ್ಸ್‌ನಲ್ಲಿ (Asian Games) ಸುಮಾರು 11000 ಕ್ರೀಡಾಪಟುಗಳು ಪಾಲ್ಗೊಳ್ಳುವ ನಿರೀಕ್ಷೆ ಇತ್ತು. ಒಟ್ಟು 42 ಕ್ರೀಡಾಗಳಲ್ಲಿ ಸ್ಪರ್ಧಾಳುಗಳು ಭಾಗವಹಿಸಲು ಸಜ್ಜಾಗಿದ್ದರು. ಇದರಲ್ಲಿ ಕ್ರಿಕೆಟ್ ಸಹ ಸೇರಿತ್ತು. ಇತ್ತೀಚೆಗಷ್ಟೇ ಕ್ರೀಡಾಕೂಟ ಮುಂದೂಡಿಕೆಯಾಗುವ ಬಗ್ಗೆ ಸುಳಿವು ಸಿಕ್ಕಿತ್ತು. ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಸಹ ಈ ಬಗ್ಗೆ ಪ್ರತಿಕ್ರಿಯಿಸಿ, ಚೀನಾದ ಬಳಿ ಪರಿಸ್ಥಿತಿ ಬಗ್ಗೆ ಮಾಹಿತಿ ಕೇಳುವುದಾಗಿ ತಿಳಿಸಿದ್ದರು.
ಭಾರತೀಯರಿಂದ ಮಿಶ್ರ ಪ್ರತಿಕ್ರಿಯೆ: ಏಷ್ಯನ್ ಗೇಮ್ಸ್ ಮುಂದೂಡಿಕೆಯಾಗಿದ್ದಕ್ಕೆ ಭಾರತೀಯ ಕ್ರೀಡಾಪಟುಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕ್ರೀಡಾಕೂಟದಲ್ಲಿ ಚಿನ್ನ ಗೆದ್ದು 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ನೇರ ಅರ್ಹತೆ ಪಡೆಯುವ ನಿರೀಕ್ಷೆಯಲ್ಲಿದ್ದ ಭಾರತ ಹಾಕಿ ತಂಡಗಳಿಗೆ ನಿರಾಸೆ ಉಂಟಾಗಿದೆ. ಇನ್ನು ತಾರಾ ಈಜುಪಟು ಸಾಜನ್ ಪ್ರಕಾಶ್ ಸಹ ಬೇಸರ ವ್ಯಕ್ತಪಡಿಸಿದ್ದು, ಮುಂದಿನ ಒಂದು ವರ್ಷಕ್ಕೆ ಹೊಸದಾಗಿ ಯೋಜನೆ ರೂಪಿಸಬೇಕಿದೆ ಎಂದಿದ್ದಾರೆ.
ಇದೇ ವೇಳೆ ಭಾರತೀಯ ಟೆನಿಸ್ ಸಂಸ್ಥೆ(ಎಐಟಿಎ), ‘ಒಳ್ಳೆಯದ್ದೇ ಆಯಿತು. ಏಷ್ಯನ್ ಗೇಮ್ಸ್ ಹಾಗೂ ನಾರ್ವೆ ವಿರುದ್ಧದ ಡೇವಿಸ್ ಕಪ್ ಪಂದ್ಯ ಒಟ್ಟಿಗೆ ಆಡಬೇಕಿತ್ತು. ಕ್ರೀಡಾಕೂಟ ಮುಂದೂಡಿಕೆ ಆಗಿರುವುದರಿಂದ ಡೇವಿಸ್ ಕಪ್ ಪಂದ್ಯದತ್ತ ಹೆಚ್ಚು ಗಮನ ಹರಿಸಬಹುದು’ ಎಂದಿದೆ. ಇನ್ನು ಭಾರತೀಯ ಒಲಿಂಪಿಕ್ಸ್ ಸಂಸ್ಥೆ(ಐಒಎ) ಕಾರ‍್ಯದರ್ಶಿ ರಾಜೀವ್ ಮೆಹ್ತಾ ಮಾಧ್ಯಮಗಳೊಂದಿಗೆ ಮಾತನಾಡಿ, ‘ನಮ್ಮ ಅಥ್ಲೀಟ್‌ಗಳಿಗೆ ಹಿನ್ನಡೆ ಆಗಲಿದೆ. ಈಗಾಗಲೇ ಎಲ್ಲರೂ ಸಿದ್ಧತೆ ಆರಂಭಿಸಿದ್ದರು. 6 ತಿಂಗಳು ಇಲ್ಲವೇ ಒಂದು ವರ್ಷ ಬಳಿಕ ಕ್ರೀಡಾಕೂಟ ನಡೆದರೆ ಹಲವು ಕ್ರೀಡಾಪಟುಗಳು ಅರ್ಹತೆ ಪಡೆಯುವಲ್ಲಿ ಹಿಂದೆ ಬೀಳಬಹುದು’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
IPL 2022 ಕೊನೇ ಓವರ್ ನಲ್ಲಿ 9 ರನ್ ರಕ್ಷಿಸಿಕೊಂಡು ಗೆಲುವು ಕಂಡ ಮುಂಬೈ!
ಕಿರಿಯರ ಕೂಟ ರದ್ದು: ಇದೇ ವರ್ಷ ಡಿಸೆಂಬರ್ 20ರಿಂದ 28ರ ವರೆಗೂ ಚೀನಾದ ಶಾನ್‌ಟೌನಲ್ಲಿ ನಡೆಯಬೇಕಿದ್ದ 3ನೇ ಕಿರಿಯರ ಏಷ್ಯನ್ ಗೇಮ್ಸ್ ಕೋವಿಡ್ ಕಾರಣದಿಂದ ರದ್ದುಗೊಂಡಿದೆ. ಮುಂದಿನ ಆವೃತ್ತಿಯು 2025ರಲ್ಲಿ ತಾಶ್ಕೆಂಟ್‌ನಲ್ಲಿ ನಡೆಯಲಿದೆ.
ಯೋಗ ಕಲಿಯೋದು ಸುಲಭನಾ..? ಖೇಲೋ ಇಂಡಿಯಾದಲ್ಲಿ ಮಿಂಚಿದ ಯೋಗಪಟು ಖುಷಿ ಹೇಮಚಂದ್ರ ಸಂದರ್ಶನ
ಆದಾಗ್ಯೂ, OCA ಯ ಕಾರ್ಯಕಾರಿ ಸಮಿತಿಯ ಸಭೆಯ ನಂತರ, ಕ್ರೀಡಾಕೂಟವನ್ನು ಮುಂದೂಡಲು ನಿರ್ಧರಿಸಿತು. 2023 ರಲ್ಲಿ ಅಂತರರಾಷ್ಟ್ರೀಯ ಕ್ಯಾಲೆಂಡರ್ ಅನ್ನು ಸಾಕಷ್ಟು ಕ್ರೀಡಾಕೂಟಗಳಿದೆ. ಅಲ್ಲಿ ಎಲ್ಲಾ ಕ್ರೀಡೆಗಳಿಗೆ ಒಲಂಪಿಕ್ ಅರ್ಹತಾ ಈವೆಂಟ್‌ಗಳನ್ನು ನಡೆಸಲಾಗುತ್ತದೆ, OCA ಮತ್ತು ಏಷ್ಯನ್ ಗೇಮ್ಸ್ ಆಯೋಜಕರು ತಕ್ಷಣವೇ ಗೇಮ್ಸ್‌ಗೆ ಹೊಸ ದಿನಾಂಕಗಳನ್ನು ಘೋಷಿಸಲಿಲ್ಲ. ಈ ನಿರ್ಧಾರವು ಪ್ಯಾರಿಸ್ ಒಲಿಂಪಿಕ್ಸ್ ಅರ್ಹತಾ ವ್ಯವಸ್ಥೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ, ವಿಶೇಷವಾಗಿ ಹಾಕಿಯಂತಹ ಕ್ರೀಡೆಗಳಲ್ಲಿ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತರಿಗೆ ನೇರ ಅರ್ಹತೆ ಸಿಗುತ್ತದೆ.