ವಾರ್ನರ್ ಬದಲಿಗೆ ಮತ್ತೊಬ್ಬ ವಿದೇಶಿ ಕ್ರಿಕೆಟಿಗ ?

First Published 30, Mar 2018, 1:03 PM IST
Kushal Perera May Join SRH
Highlights

ವಾರ್ನರ್'ರಂತೆ ಪೆರೇರಾ ಸಹ ಸ್ಫೋಟಕ ಬ್ಯಾಟ್ಸ್ಮನ್ ಆಗಿದ್ದು, ಅವರು ತಂಡವನ್ನು ಕೂಡಿಕೊಳ್ಳುವ ವಿಶ್ವಾಸವಿದೆಎಂದು ಸನ್‌ರೈಸರ್ಸ್‌ ತಂಡದ ಮೂಲಗಳು ತಿಳಿಸಿವೆ.

ಹೈದರಾಬಾದ್(ಮಾ.30): ಈ ಆವೃತ್ತಿಯ ಐಪಿಎಲ್ ನಿಂದ ಹೊರಬಿದ್ದಿರುವ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಬದಲಿಗೆ, ಶ್ರೀಲಂಕಾದ ಸ್ಫೋಟಕ ಬ್ಯಾಟ್ಸ್ಮನ್ ಕುಸಾಲ್ ಪೆರೇರಾ ಸನ್‌ರೈಸರ್ಸ್‌ ಹೈದರಾಬಾದ್ ತಂಡ ಸೇರುವ ಸಾಧ್ಯತೆ ಇದೆ. ‘ಈಗಾಗಲೇ ಕುಸಾಲ್ ಪೆರೇರಾರನ್ನು ಸಂಪರ್ಕಿಸಲಾಗಿದೆ.

ವಾರ್ನರ್'ರಂತೆ ಪೆರೇರಾ ಸಹ ಸ್ಫೋಟಕ ಬ್ಯಾಟ್ಸ್ಮನ್ ಆಗಿದ್ದು, ಅವರು ತಂಡವನ್ನು ಕೂಡಿಕೊಳ್ಳುವ ವಿಶ್ವಾಸವಿದೆ’ ಎಂದು ಸನ್‌ರೈಸರ್ಸ್‌ ತಂಡದ ಮೂಲಗಳು ತಿಳಿಸಿವೆ. ಇತ್ತೀಚೆಗೆ ನಡೆದಿದ್ದ ತ್ರಿಕೋನ ಟಿ20 ಸರಣಿಯಲ್ಲಿ ಪೆರೇರಾ ತಮ್ಮ ಆಕರ್ಷಕ ಆಟದ ಮೂಲಕ ಗಮನ ಸೆಳೆದಿದ್ದರು. ಕಳೆದ ನಾಲ್ಕು ಆವೃತ್ತಿಗಳಲ್ಲಿ ಡೇವಿಡ್ ವಾರ್ನರ್, ಸನ್‌ರೈಸರ್ಸ್‌ ಹೈದರಾಬಾದ್ ಪರ ಗರಿಷ್ಠ ರನ್ ದಾಖಲಿಸಿದ್ದು. ಅಲ್ಲದೇ 2

ಆವೃತ್ತಿಗಳ ಹಿಂದೆ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಹೀಗಾಗಿ ವಾರ್ನರ್ ಅನುಪಸ್ಥಿತಿ ಸನ್‌ರೈಸರ್ಸ್‌ ತಂಡವನ್ನು ಬಲವಾಗಿ ಕಾಡಲಿದೆ. ಕುಸಾಲ್ ಪೆರೇರಾ ಸ್ಫೋಟಕ ಆಟಕ್ಕೆ ಹೆಸರುವಾಸಿಯಾಗಿದ್ದು, ಅವರು ಆರಂಭಿಕನ ಸ್ಥಾನಕ್ಕೆ ಸೂಕ್ತ ಎಂದು ವಿಶ್ಲೇಷಿಸಲಾಗುತ್ತಿದೆ.

loader