ಪ್ರಸಕ್ತ ಸಾಲಿನ ಕೌಂಟಿ ಚಾಂಪಿಯನ್’ಶಿಪ್’ನಲ್ಲಿ ಸಂಗಕ್ಕಾರ 106.50 ಸರಾಸರಿಯಲ್ಲಿ ಒಂದು ಸಾವಿರಕ್ಕೂ ಅಧಿಕ ರನ್ ಕಲೆಹಾಕಿದ್ದಾರೆ.

ಮ್ಯಾಂಚೆಸ್ಟರ್(ಸೆ.28): ಶ್ರೀಲಂಕಾದ ಮಾಜಿ ನಾಯಕ ಕುಮಾರ್ ಸಂಗಕ್ಕಾರ ಪ್ರಥಮ ದರ್ಜೆ ಕ್ರಿಕೆಟ್’ಗೆ ವಿದಾಯ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಇಂಗ್ಲೆಂಡ್ ಕೌಂಟಿ ಕ್ರಿಕೆಟ್’ನಲ್ಲಿ ಸರ್ರೆ ತಂಡದ ಪರ ಆಡಿದ ಸಂಗಕ್ಕಾರ ತಮ್ಮ ಕೊನೆಯ ಇನಿಂಗ್ಸ್’ನಲ್ಲಿ ಅಜೇಯ 35 ರನ್ ಗಳಿಸಿದರು. ಅಕ್ಟೋಬರ್’ನಲ್ಲಿ 40ನೇ ವಸಂತಕ್ಕೆ ಕಾಲಿರಿಸಲಿರುವ ಸಂಗಕ್ಕಾರ, 1998ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್’ಗೆ ಪಾದಾರ್ಪಣೆ ಮಾಡಿದ್ದರು.

ಇದುವರೆಗೆ ಪ್ರಥಮ ದರ್ಜೆ ಕ್ರಿಕೆಟ್’ನಲ್ಲಿ 20 ಸಾವಿರಕ್ಕೂ ಅಧಿಕ ರನ್ ಕಲೆ ಹಾಕಿರುವುದು ಲಂಕಾ ಮಾಜಿ ವಿಕೆಟ್ ಕೀಪರ್ ಹೆಗ್ಗಳಿಕೆ. ಪ್ರಸಕ್ತ ಸಾಲಿನ ಕೌಂಟಿ ಚಾಂಪಿಯನ್’ಶಿಪ್’ನಲ್ಲಿ ಸಂಗಕ್ಕಾರ 106.50 ಸರಾಸರಿಯಲ್ಲಿ ಒಂದು ಸಾವಿರಕ್ಕೂ ಅಧಿಕ ರನ್ ಕಲೆಹಾಕಿದ್ದಾರೆ.

2015ರಲ್ಲಿ ಸಂಗಕ್ಕಾರ ಟೆಸ್ಟ್ ಕ್ರಿಕೆಟ್’ನಿಂದ ನಿವೃತ್ತಿ ಪಡೆದಿದ್ದರು.