Asianet Suvarna News Asianet Suvarna News

ಐಸಿಸಿ ಟಿ20 ರ‍್ಯಾಂಕಿಂಗ್: ವೃತ್ತಿಜೀವನದ ಶ್ರೇಷ್ಠ ಸಾಧನೆ ಮಾಡಿದ ಕುಲ್ದೀಪ್

ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ರೋಹಿತ್‌ ಶರ್ಮಾ 3 ಸ್ಥಾನಗಳ ಏರಿಕೆ ಕಂಡು 7ನೇ ಸ್ಥಾನ ಪಡೆದರೆ, ಕೆ.ಎಲ್‌.ರಾಹುಲ್‌ 10ನೇ ಸ್ಥಾನಕ್ಕೆ ಕುಸಿದಿದ್ದಾರೆ. ವಿರಾಟ್‌ ಕೊಹ್ಲಿ 19ನೇ ಸ್ಥಾನದಲ್ಲಿದ್ದಾರೆ.

Kuldeep Yadav reaches new high in T20I rankings
Author
Dubai - United Arab Emirates, First Published Feb 12, 2019, 12:56 PM IST

ದುಬೈ[ಫೆ.12]: ಭಾರತ ತಂಡದ ಸ್ಪಿನ್ನರ್‌ ಕುಲ್ದೀಪ್‌ ಯಾದವ್‌, ಐಸಿಸಿ ಟಿ20 ಬೌಲರ್‌ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ್ದಾರೆ. ಅವರ ವೃತ್ತಿ ಜೀವನದ ಶ್ರೇಷ್ಠ ರ‍್ಯಾಂಕಿಂಗ್ ಇದಾಗಿದೆ. 

ಕುಲ್ದೀಪ್‌ ಹೊರತುಪಡಿಸಿ ಭಾರತದ ಇನ್ಯಾವ ಬೌಲರ್‌ ಸಹ ಅಗ್ರ 10ರಲ್ಲಿ ಸ್ಥಾನ ಪಡೆದಿಲ್ಲ. ಇದೇ ವೇಳೆ ನ್ಯೂಜಿಲೆಂಡ್‌ ವಿರುದ್ಧ 1-2ರಿಂದ ಟಿ20 ಸರಣಿ ಸೋತ ಭಾರತ 2 ರೇಟಿಂಗ್‌ ಅಂಕ ಕಳೆದುಕೊಂಡರೂ, 2ನೇ ಸ್ಥಾನದಲ್ಲಿ ಮುಂದುವರಿದಿದೆ. ಪಾಕಿಸ್ತಾನ ನಂ.1 ಸ್ಥಾನ ಕಾಯ್ದುಕೊಂಡಿದೆ. 

ICC ನೂತನ T20 ರ‍್ಯಾಂಕಿಂಗ್ ಪ್ರಕಟ: ಅಗ್ರಸ್ಥಾನ ಉಳಿಸಿಕೊಂಡ ಏಷ್ಯಾದ 2 ತಂಡಗಳು

ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ರೋಹಿತ್‌ ಶರ್ಮಾ 3 ಸ್ಥಾನಗಳ ಏರಿಕೆ ಕಂಡು 7ನೇ ಸ್ಥಾನ ಪಡೆದರೆ, ಕೆ.ಎಲ್‌.ರಾಹುಲ್‌ 10ನೇ ಸ್ಥಾನಕ್ಕೆ ಕುಸಿದಿದ್ದಾರೆ. ವಿರಾಟ್‌ ಕೊಹ್ಲಿ 19ನೇ ಸ್ಥಾನದಲ್ಲಿದ್ದಾರೆ.

ಬ್ಯಾಟ್ಸ್’ಮನ್’ಗಳ ಟಾಪ್ 10 ಪಟ್ಟಿ ಇಲ್ಲಿದೆ ನೋಡಿ

ಸ್ಥಾನ             ಆಟಗಾರ ರೇಟಿಂಗ್ ಅಂಕ
1       ಬಾಬರ್ ಅಜಂ[Pak]  885(-)
ಕಾಲಿನ್ ಮನ್ರೋ[NZ]     825(-)
3         ಆ್ಯರೋನ್ ಫಿಂಚ್[Aus] 806(-)
4 ಎವಿನ್ ಲೆವಿಸ್[WI]         751(-)
5 ಗ್ಲೇನ್ ಮ್ಯಾಕ್ಸ್’ವೆಲ್[Aus]   745(+1)
6 ಫಖರ್ ಜಮಾನ್[Pak]     700(-1)
7 ರೋಹಿತ್ ಶರ್ಮಾ[Ind]     698(+3)
8 ಅಲೆಕ್ಸ್ ಹೇಲ್ಸ್[Eng]     697(-)
9 ಜೇಸನ್ ರಾಯ್[Eng]     688(+2)
10 ಕೆ.ಎಲ್ ರಾಹುಲ್[Ind]     677(-3)

ಬೌಲರ್’ಗಳ ಟಾಪ್ 10 ಪಟ್ಟಿ

ಸ್ಥಾನ           ಆಟಗಾರ   ರೇಟಿಂಗ್ ಅಂಕ
1 ರಶೀದ್ ಖಾನ್[afg]         793(-)
2 ಕುಲ್ದೀಪ್ ಯಾದವ್[Ind]     728(+1)
3 ಶಾಬಾದ್ ಖಾನ್[Pak]     720(-1)
4 ಇಮಾದ್ ವಾಸೀಂ[Pak]     705(+5)
5 ಆದಿಲ್ ರಶೀದ್[Eng]     676(-1)
6 ಆ್ಯಡಂ ಜಂಪಾ[Aus]         670(-)
7 ಶಕೀಬ್ ಅಲ್ ಹಸನ್[Ban]     658(-)
8 ಇಶ್ ಸೋಧಿ[NZ]         657(-4)
9 ಫಾಹೀಮ್ ಅಶ್ರಫ್[Pak]     655(-1)
10 ಮಿಚೆಲ್ ಸ್ಯಾಂಟ್ನರ್[NZ]     638(+4)

 

Follow Us:
Download App:
  • android
  • ios