ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ಆರ್ ಅಶ್ವಿನ್ ಮಂಕಡಿಂಗ್ ಮೂಲಕ ಜೋಸ್ ಬಟ್ಲರ್ ರನೌಟ್ ಮಾಡಿ ಟೀಕೆಗೆ ಗುರಿಯಾಗಿದ್ದಾರೆ. ಇದೀಗ ಆರ್ ಅಶ್ವಿನ್ ಮಂಕಡಿಂಗ್ ಕುರಿತು ಮುಂಬೈ ಆಲ್ರೌಂಡರ್ ಕ್ರುನಾಲ್ ಪಾಂಡ್ಯ ಕಿಡ್ಡಿಂಗ್ ಮಾಡಿದ್ದಾರೆ.
ಮೊಹಾಲಿ(ಮಾ.30): ರಾಜಸ್ಥಾನ ರಾಯಲ್ಸ್ ವಿರುದ್ಧ ಆರ್ ಅಶ್ವಿನ್ ಮಂಕಡಿಂಗ್ ರನೌಟ್ ಭಾರಿ ವಿವಾದ ಸೃಷ್ಟಿಸಿದ್ದರು. ಜೋಸ್ ಬಟ್ಲರ್ ರನೌಟ್ ಮಾಡಿದ ಅಶ್ವಿನ್ ಟೀಕೆಗೆ ಗುರಿಯಾಗಿದ್ದರು. ಇದೀಗ ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಆಲ್ರೌಂಡರ್ ಕ್ರುನಾಲ್ ಪಾಂಡ್ಯ, ಮಂಕಡಿಂಗ್ ಕುರಿತು ಆರ್ ಅಶ್ವಿನ್‌ಗೆ ಟಾಂಗ್ ನೀಡಿದ್ದಾರೆ.
ಇದನ್ನೂ ಓದಿ: ಮಂಕಡ್ ರನೌಟ್ ಅಂದ್ರೇನು? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್
ಬೌಲಿಂಗ್ ಮಾಡಲು ಬಂದ ಕ್ರುನಾಲ್ ಪಾಂಡ್ಯ, ಬೌಲಿಂಗ್ ಮಾಡದೆ ತಕ್ಷಣವೇ ಅಂಪೈರ್‌ನತ್ತ ಮುಖ ಮಾಡಿ ಮಂಕಡಿಂಗ್ ರನೌಟ್ ಮಾಡೋ ಸೂಚನೆ ನೀಡಿದರು. ಅಷ್ಟರಲ್ಲಿ ನಾನ್ ಸ್ಟ್ರೈಕ್‌ನಲ್ಲಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ಬ್ಯಾಟ್ಸ್‌ಮನ್ ಮಯಾಂಕ್ ಅಗರ್ವಾಲ್ ಕ್ರಿಸ್ ಸೇರಿಕೊಂಡರು. ಆದರೆ ಕ್ರುನಾಲ್ ತನ್ನ ಜರ್ಸಿ ಸರಿ ಮಾಡೋ ರೀತಿ ಮಾಡಿ ಮತ್ತೆ ಬೌಲಿಂಗ್ ಮಾಡಲು ತೆರಳಿದರು.
— Liton Das (@BattingAtDubai) March 30, 2019
ಇದನ್ನೂ ಓದಿ: ಆರ್ ಅಶ್ವಿನ್ ಮಂಕಡಿಂಗ್ ರನೌಟ್- ಟ್ವಿಟರ್‌ನಲ್ಲಿ ಶುರುವಾಯ್ತು ವಾರ್!
ಪಾಂಡ್ಯ ಕಿಡ್ಡಿಂಗ್ ಮುಂಬೈ ತಂಡದ ಸಹ ಆಟಗಾರರಲ್ಲಿ ನಗು ತರಿಸಿತ್ತು. ಆದರೆ ಕಿಂಗ್ಸ್ ಇಲೆವೆನ್ ತಂಡ ಮುಜುಗರಕ್ಕೆ ಒಳಗಾಯ್ತು. ಪ್ರಮುಖವಾಗಿ ಆರ್ ಅಶ್ವಿನ್ ಕಿಡ್ಡಿಂಗ್ ಮಾಡಿದ ಕ್ರುನಾಲ್ ಮಂಕಡಿಂಗ್ ವಿವಾದದ ಬಿಸಿ ಏರಿಸಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Mar 30, 2019, 9:15 PM IST