ವಿದ್ಯಾರ್ಥಿ ಭವನದಲ್ಲಿ ಬೆಣ್ಣೆ ದೋಸೆ ಸವಿದ ಆಸ್ಟ್ರೇಲಿಯಾ ಕ್ರಿಕೆಟಿಗ ಹಾಗ್!
ಬೆಂಗಳೂರಿನಲ್ಲಿದ್ದರೆ ವಿದ್ಯಾರ್ಥಿ ಭವನ ಹೊಟೆಲ್‌ನಲ್ಲಿ ದೋಸೆ ತಿನ್ನದಿದ್ದರೆ ಹೇಗೆ? ಇದೀಗ 76 ವರ್ಷಗಳಿಂದ ದೋಸೆಯಲ್ಲಿ ಹೆಸರುವಾಸಿಯಾಗಿರುವ ಇದೇ ವಿದ್ಯಾರ್ಥಿ ಭವನಕ್ಕೆ ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಬ್ರಾಡ್ ಹಾಗ್ ಭೇಟಿ ನೀಡಿ ಬೆಣ್ಣೆ ದೋಸೆ ಸವಿದಿದ್ದಾರೆ.
ಬೆಂಗಳೂರು(ಆ.24): ಉದ್ಯಾನ ನಗರಿಯ ವಿದ್ಯಾರ್ಥಿ ಭವನ್ ಹೆಸರು ಕೇಳಿದರೆ ಸಾಕು, ಬಾಯಲ್ಲಿ ನೀರೂರಿಸುವ ದೋಸೆ ಕಣ್ಣ ಮುಂದೆ ಬಂದು ನಿಲ್ಲುತ್ತೆ. ದೋಸೆ ರುಚಿ ನೋಡಬೇಕೆಂದರೆ ವಿದ್ಯಾರ್ಥಿ ಭವನಕ್ಕೊಮ್ಮೆ ಭೇಟಿ ನೀಡಲೇಬೇಕು. ಅದೆಷ್ಟೋ ಜನರಿಗೆ ದಿನ ಬೆಳಗಾಗವುದೇ ವಿದ್ಯಾರ್ಥಿ ಭವನದ ದೋಸೆಯಿಂದ. ಇದೀಗ ಜನಪ್ರಿಯ ವಿದ್ಯಾರ್ಥಿ ಭವನಕ್ಕೆ ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಬ್ರಾಡ್ ಹಾಗ್ ಭೇಟಿ ನೀಡಿ ಬೆಣ್ಣೆ ದೋಸೆ ಸವಿದಿದ್ದಾರೆ.
ಇದನ್ನೂ ಓದಿ: ಚೆಂಡೆ ನುಡಿಸಿ ಭೇಷ್ ಎನಿಸಿಕೊಂಡ ಬ್ರಾಡ್ ಹಾಗ್!
ಕರ್ನಾಟಕ ಪ್ರಿಮಿಯರ್ ಲೀಗ್ ಟೂರ್ನಿಯ ಪ್ರತಿ ಆವೃತ್ತಿ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿದೆ. ಇಷ್ಟೇ ಅಲ್ಲ ಕರ್ನಾಟಕದ ತಿಂಡಿ ತನಿಸುಗಳು ವಿಶ್ವಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಕೆಪಿಎಲ್ ಟೂರ್ನಿಯ ವೀಕ್ಷಕ ವಿವರಣೆಗಾಗಿ ಬೆಂಗಳೂರಿಗೆ ಆಗಮಿಸಿದ ಬ್ರಾಡ್ ಹಾಗ್ ಇದೀಗ ನಗರದ ಪ್ರಸಿದ್ದ ವಿದ್ಯಾರ್ಥಿ ಭವನ ಹೊಟೆಲ್‌ನಲ್ಲಿ ಬೆಣ್ಣೆ ದೋಸೆ ಸವಿದು ಎಲ್ಲರ ಗಮನಸೆಳೆದಿದ್ದಾರೆ.
ಇದನ್ನೂ ಓದಿ: ಕೆಪಿಎಲ್‌ನಲ್ಲಿ ಐಪಿಎಲ್‌ಗೆ ಪ್ರತಿಭೆಗಳನ್ನು ಆರಿಸುವೆ: ಹಸ್ಸಿ
ಬ್ರಾಡ್ ಹಾಗ್ ಬೆಂಗಳೂರಿಗೆ ಆಗಮಿಸುತ್ತಿದ್ದಂತೆ ಕರಾವಳಿ ಕಲೆ ಯಕ್ಷಗಾನಕ್ಕೆ ಹೆಜ್ಜೆ ಹಾಕಿದ್ದಲ್ಲದೆ, ಚೆಂಡೆ ನುಡಿಸಿ ಬೇಷ್ ಎನಿಸಿಕೊಂಡಿದ್ದರು. ಇದೀಗ ವಿದ್ಯಾರ್ಥಿ ಭವನ್ ಹೊಟೆಲ್‌ಗೆ ತೆರಳಿ ವಿವಿಧ ದೋಸೆ ತಿನಿಸುಗಳನ್ನು ಸವಿದಿದ್ದಾರೆ. 48 ವರ್ಷದ ಹಾಗ್, ವಿದ್ಯಾರ್ಥಿ ಭವನದ ದೋಸೆಗೆ ಮಾರು ಹೋಗಿದ್ದಾರೆ. ಕಳೆದ 76 ವರ್ಷಗಳಿಂದ ವಿದ್ಯಾರ್ಥಿ ಭವನ್ ವಿವಿದ ದೋಸೆಯನ್ನು ಜನರಿಗೆ ಉಣಬಡಿಸುತ್ತಿದೆ. ಸರಿಸುಮಾರು 2 ಕೋಟಿಗೂ ಅಧಿಕ ದೋಸೆಗಳು ಇಲ್ಲಿ ಮಾರಾಟವಾಗಿವೆ
"