ಬೆಂಗಳೂರು(ಆ.23): ಕೆಪಿಎಲ್‌ 8ನೇ ಆವೃತ್ತಿಯಲ್ಲಿ ಬೆಂಗಳೂರು ಬ್ಲಾಸ್ಟರ್ಸ್‌ ಮೊದಲ ಗೆಲುವು ದಾಖಲಿಸಿದೆ. ಮಳೆ ಅಡ್ಡಿಪಡಿಸಿದ ಪಂದ್ಯದಲ್ಲಿ ಮಾಜಿ ಚಾಂಪಿಯನ್‌ ಬಳ್ಳಾರಿ ಟಸ್ಕರ್ಸ್‌ ವಿರುದ್ಧ ವಿಜೆಡಿ ನಿಯಮದಡಿ 1 ರನ್‌ ರೋಚಕ ಜಯ ಪಡೆಯಿತು.

KPL 2019: ಬಳ್ಳಾರಿ ಟಸ್ಕರ್ಸ್‌ಗೆ ಶರಣಾದ ಹುಬ್ಳಿ ಟೈಗರ್ಸ್

ಗುರುವಾರ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಬೆಂಗಳೂರು 16 ಓವರಲ್ಲಿ 8 ವಿಕೆಟ್‌ಗೆ 93 ರನ್‌ ಗಳಿಸಿತು. 12 ಓವರ್‌ಗಳಲ್ಲಿ 4 ವಿಕೆಟ್‌ಗೆ 63 ರನ್‌ ಗಳಿಸಿದ್ದಾಗ ಮಳೆ ಸುರಿದ ಕಾರಣ ಪಂದ್ಯವನ್ನು 16 ಓವರ್‌ಗೆ ಸೀಮಿತಗೊಳಿಸಲಾಯಿತು. 

ಮಳೆಯಿಂದಾಗಿ KPL ಟೂರ್ನಿಯಲ್ಲಿ ಬದಲಾವಣೆ; ಹೊಸ ವೇಳಾಪಟ್ಟಿ ಪ್ರಕಟ!

94 ರನ್‌ಗಳ ಗುರಿ ಬೆನ್ನತ್ತಿದ ಬಳ್ಳಾರಿ ಟಸ್ಕರ್ಸ್‌ 8.2 ಓವರಲ್ಲಿ 5 ವಿಕೆಟ್‌ಗೆ 55 ರನ್‌ ಗಳಿಸಿತ್ತು. ಈ ವೇಳೆ ಮತ್ತೆ ಮಳೆ ಸುರಿದ ಕಾರಣ, ಫಲಿತಾಂಶಕ್ಕಾಗಿ ವಿಜೆಡಿ ನಿಯಮದ ಮೊರೆ ಹೋಗಲಾಯಿತು. ಈ ಹಂತದಲ್ಲಿ ಬಳ್ಳಾರಿ ಒಂದು ರನ್‌ ಹಿಂದಿದ್ದ ಕಾರಣ, ಬೆಂಗಳೂರಿಗೆ ಗೆಲುವು ಒಲಿಯಿತು.

ಸ್ಕೋರ್‌: 
ಬೆಂಗಳೂರು ಬ್ಲಾಸ್ಟರ್ಸ್‌ 93/8 (ರೋಹನ್‌ 22, ಕಾಜಿ 3-15) 
ಬಳ್ಳಾರಿ ಟಸ್ಕರ್ಸ್‌ 55/5 (ಅಭಿಷೇಕ್‌ 30, ಭರತ್‌ 2-9)