8ನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಹುಬ್ಳಿ ಟೈಗರ್ಸ್ ವಿರುದ್ದ ಬಳ್ಳಾರಿ ಟಸ್ಕರ್ಸ್ 9 ರನ್‌ಗಳ ರೋಚಕ ಜಯ ಸಾಧಿಸಿದೆ. ಈ ಪಂದ್ಯದ ವರದಿ ಇಲ್ಲಿದೆ ನೋಡಿ...

ಬೆಂಗಳೂರು[ಆ.19]: ಬ್ಯಾಟಿಂಗ್-ಬೌಲಿಂಗ್’ನಲ್ಲಿ ಸಂಘಟಿತ ಪ್ರದರ್ಶನ ತೋರಿದ ಬಳ್ಳಾರಿ ಟಸ್ಕರ್ಸ್ 9 ರನ್ ಗಳಿಂದ ಹುಬ್ಳಿ ಟೈಗರ್ಸ್ ತಂಡವನ್ನು ಮಣಿಸಿದೆ. ಇದರೊಂದಿಗೆ ಬಳ್ಳಾರಿ ಸತತ ಎರಡನೇ ಗೆಲುವು ದಾಖಲಿಸಿದರೆ, ಹುಬ್ಳಿ ಎರಡನೇ ಸೋಲು ಕಾಣುವುದರೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲೇ ಉಳಿದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

KPL 2019: ಹುಬ್ಬಳ್ಳಿ ಪಂದ್ಯಗಳು ಬೆಂಗ್ಳೂರು, ಮೈಸೂರಿಗೆ ಶಿಫ್ಟ್‌

ಬಳ್ಳಾರಿ ನೀಡಿದ್ದ ಸವಾಲಿನ ಗುರಿ ಬೆನ್ನತ್ತಿದ ಹುಬ್ಳಿ ಮೊದಲ ಓವರ್’ನಲ್ಲೇ ಮೊಹಮ್ಮದ್ ತಾಹಾ ವಿಕೆಟ್ ಕಳೆದುಕೊಂಡಿತು. ಆ ಬಳಿಕ ವಿಶ್ವನಾಥನ್[30], ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಲವ್’ನೀತ್ ಸಿಸೋಡಿಯಾ[22], ಶಿರ್ಜಿತ್[22] ತಂಡಕ್ಕೆ ಆಸರೆಯಾದರು. ಕೊನೆಯಲ್ಲಿ ವಿನಯ್ ಕುಮಾರ್[37] ಹಾಗೂ ಪ್ರವೀಣ್ ದುಬೆ[28] ರನ್ ಬಾರಿಸಿದರಾದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.

ಬಳ್ಳಾರಿ ಪರ ಕಾರ್ತಿಕ್ ಸಿ.ಎ ಮೂರು ವಿಕೆಟ್ ಪಡೆದರೆ, ಅಬ್ರರ್ ಖಾಜಿ 2, ಪ್ರಸಿದ್ಧ್ ಕೃಷ್ಣ, ಕೆ ಗೌತಮ್ ಹಾಗೂ ಕೆ.ಪಿ ಅಪ್ಪಣ್ಣ ತಲಾ ಒಂದೊಂದು ವಿಕೆಟ್ ಪಡೆದರು. 

KPL 2019: ಶಿವಮೊಗ್ಗ ಲಯನ್ಸ್ ಘರ್ಜನೆಗೆ ಮೈಸೂರ್ ಪಂಚರ್!

ಇದಕ್ಕೂ ಮೊದಲು ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಬಳ್ಳಾರಿ ಟಸ್ಕರ್ಸ್ ಆರಂಭಿಕ ಆಘಾತ ಅನುಭವಿಸಿತು. ಕಾರ್ತಿಕ್ ಬಲಿ ಪಡೆಯುವಲ್ಲಿ ನಾಯಕ ವಿನಯ್ ಕುಮಾರ್ ಯಶಸ್ವಿಯಾದರು. ಆದರೆ ಎರಡನೇ ವಿಕೆಟ್’ಗೆ ಅಭಿಷೇಕ್ ರೆಡ್ಡಿ -ದೇವದತ್ ಪಡಿಕ್ಕಲ್ ಜೋಡಿ ಅರ್ಧಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ರೆಡ್ಡಿ 24 ರನ್ ಬಾರಿಸಿ ಮಿತ್ರಕಾಂತ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಇದರ ಬೆನ್ನಲ್ಲೇ ನಾಯಕ ಬಳ್ಳಾರಿ ಟರ್ಸರ್ಸ್ ನಾಯಕ CM ಗೌತಮ್[2] ಕೂಡಾ ಪೆವಿಲಿಯನ್ ಸೇರಿದರು. ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ಮತ್ತೊಂದೆಡೆ ಎಚ್ಚರಿಕೆಯ ಆಟವಾಡಿದ ದೇವದತ್ ಪಡಿಕಲ್ 56 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 70 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಜೀಸನ್ ಅಲಿ ಸಯ್ಯದ್[25] ಹಾಗೂ ವಿಷ್ಣು ಪ್ರಿಯಾನ್[17] ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ತಂಡವನ್ನು ಗೌರವಾನ್ವಿತ ಮೊತ್ತ ಕಲೆಹಾಕುವಲ್ಲಿ ನೆರವಾದರು.

ಸಂಕ್ಷಿಪ್ತ ಸ್ಕೋರ್:

ಬಳ್ಳಾರಿ ಟಸ್ಕರ್ಸ್: 163/8

ದೇವದತ್ತ ಪಡಿಕ್ಕಲ್: 70

ಹುಬ್ಳಿ ಟೈಗರ್ಸ್: 154/9

ವಿನಯ್ ಕುಮಾರ್: 37