ಆಗಸ್ಟ್ 25ರಂದು ಬೆಳಗಾವಿ ಪ್ಯಾಂಥರ್ಸ್ ಹಾಗೂ ಬಳ್ಳಾರಿ ಟಸ್ಕರ್ಸ್ ತಂಡಗಳು ಮುಖಾಮುಖಿಯಾಗಲಿವೆ. ಅದೇ ದಿನ ಶಿವಮೊಗ್ಗ ಲಯನ್ಸ್ ಹಾಗೂ ಬೆಂಗಳೂರು ಬ್ಲಾಸ್ಟರ್ಸ್ ನಡುವಿನ ಪಂದ್ಯ ಕೂಡಾ ಜರುಗಲಿದೆ. ಇನ್ನು ಆಗಸ್ಟ್ 26ರಂದು ಬಿಜಾಪುರ ಬುಲ್ಸ್ ಹಾಗೂ ಬಳ್ಳಾರಿ ಟಸ್ಕರ್ಸ್ ತಂಡಗಳು ಸೆಣಸಲಿವೆ

ಹುಬ್ಬಳ್ಳಿ[ಆ.23]: ಕರ್ನಾಟಕ ಪ್ರೀಮಿಯರ್ ಲೀಗ್’ನ 7ನೇ ಆವೃತ್ತಿಯ ಸತತ 3 ಪಂದ್ಯಗಳು ರದ್ದಾಗಿವೆ. ಹೀಗಾಗಿ ಹುಬ್ಬಳ್ಳಿ ಎರಡನೇ ಚರಣದ ಕೆಪಿಎಲ್’ಗೆ ವರುಣ ಅಡ್ಡಿಪಡಿಸಿದ್ದರು, ಇಲ್ಲಿ ನಡೆಯಬೇಕಿದ್ದ ಪಂದ್ಯಗಳು ಮೈಸೂರಿಗೆ ಸ್ಥಳಾಂತರಗೊಂಡಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಳೆ ಹಾಗೂ ಮೈದಾನ ಒದ್ದೆಯಾಗಿದ್ದ ಕಾರಣ, ಬುಧವಾರ ನಡೆಯಬೇಕಿದ್ದ ಹುಬ್ಬಳ್ಳಿ ಟೈಗರ್ಸ್ ಹಾಗೂ ಬಳ್ಳಾರಿ ಟಸ್ಕ​ರ್ಸ್, ಬೆಂಗಳೂರು ಬ್ಲಾಸ್ಟ​ರ್ಸ್ ಹಾಗೂ ಬಿಜಾಪುರ ಬುಲ್ಸ್‌ ನಡುವಿನ ಪಂದ್ಯಗಳು ಟಾಸ್‌ ಸಹ ಕಾಣದೆ ರದ್ದಾಗಿದ್ದವು. ಇದೀಗ ಹುಬ್ಬಳ್ಳಿ ಚರಣದ ಪಂದ್ಯಗಳು ಆಗಸ್ಟ್ 25ರಿಂದ ಮೈಸೂರಿನಲ್ಲಿ ಜರುಗಲಿವೆ.

ಇದನ್ನು ಓದಿ:ಇಲ್ಲಿದೆ ಕೆಪಿಎಲ್ ಕ್ರಿಕೆಟ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ

ಆಗಸ್ಟ್ 25ರಂದು ಬೆಳಗಾವಿ ಪ್ಯಾಂಥರ್ಸ್ ಹಾಗೂ ಬಳ್ಳಾರಿ ಟಸ್ಕರ್ಸ್ ತಂಡಗಳು ಮುಖಾಮುಖಿಯಾಗಲಿವೆ. ಅದೇ ದಿನ ಶಿವಮೊಗ್ಗ ಲಯನ್ಸ್ ಹಾಗೂ ಬೆಂಗಳೂರು ಬ್ಲಾಸ್ಟರ್ಸ್ ನಡುವಿನ ಪಂದ್ಯ ಕೂಡಾ ಜರುಗಲಿದೆ. ಇನ್ನು ಆಗಸ್ಟ್ 26ರಂದು ಬಿಜಾಪುರ ಬುಲ್ಸ್ ಹಾಗೂ ಬಳ್ಳಾರಿ ಟಸ್ಕರ್ಸ್ ತಂಡಗಳು ಸೆಣಸಲಿವೆ.