ಕೆಪಿಎಲ್ ಲೀಗ್ ಟೂರ್ನಿಗೆ ಸ್ಟಾರ್ ಆಟಗಾರರು ಮರಳಿದ್ದಾರೆ. ಶಿವಮೊಗ್ಗ ಲಯನ್ಸ್ ತಂಡಕ್ಕೆ ಈ ಬಾರಿಯ ಹರಾಜಿನಲ್ಲಿ ಗರಿಷ್ಠ ಮೊತ್ತಕ್ಕೆ ಹರಾಜಾದ ಅಭಿಮನ್ಯು ಮಿಥುನ್ ವಾಪಾಸ್ಸಾಗಿದ್ದಾರೆ. ಆದರೆ ತಂಡ ಬಲಿಷ್ಠವಾದರೂ ಗೆಲುವು ಮಾತ್ರ ಕಾಣುತ್ತಿಲ್ಲ.

ಮೈಸೂರು(ಆ.29): ಶಿವಮೊಗ್ಗ ಲಯನ್ಸ್ ತಂಡಕ್ಕೆ ನಾಯಕ ಅಭಿಮನ್ಯು ಮಿಥುನ್ ವಾಪಾಸ್ಸಾದರೂ ಗೆಲುವು ಮಾತ್ರ ಸಿಗುತ್ತಿಲ್ಲ. ಬೆಳಗಾವಿ ಪ್ಯಾಂಥರ್ಸ್ ವಿರುದ್ಧ ನಡೆದ ಕೆಪಿಎಲ್ 16ನೇ ಲೀಗ್ ಪಂದ್ಯದಲ್ಲಿ ಶಿವಮೊಗ್ಗ ಮತ್ತೆ ಸೋಲಿನ ಕಹಿ ಅನುಭವಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Scroll to load tweet…

ಟಾಸ್ ಸೋತು ಬ್ಯಾಟಿಂಗ್ ಇಳಿದ ಶಿವಮೊಗ್ಗ ಲಯನ್ಸ್ 8 ವಿಕೆಟ್ ನಷ್ಟಕ್ಕೆ 163 ರನ್ ಸಿಡಿಸಿತು. ನಿಹಾಲ್ ಉಲ್ಲಾಲ್ 34 ಹಾಗೂ ಅನಿರುದ್ ಜೋಶಿ 54 ರನ್ ಕಾಣಿಕೆ ನೀಡಿದರು. ಭಾರತ ಎ ತಂಡದಿಂದ ಮರಳಿದ ಅಭಿಮನ್ಯು ಮಿಥುನ್ 23 ರನ್ ಸಿಡಿಸಿದರು.

164 ರನ್ ಟಾರ್ಗೆಟ್ ಪಡೆದ ಬೆಳಗಾವಿ ಪ್ಯಾಂಥರ್ಸ್ ದಿಟ್ಟ ಹೋರಾಟ ನೀಡಿತು. ದಿಕ್ಷಾಂಶು ನೇಗಿ 54 ರನ್ ಸಿಡಿಸಿದರು. ನಾಯಕ ಸ್ಟುವರ್ಟ್ ಬಿನ್ನಿ 32 ರನ್ ಸಿಡಿಸಿದರು. ಅವಿನಾಶ್ ಡಿ ಅಜೇಯ 35 ರನ್ ಸಿಡಿಸೋ ಮೂಲಕ ಬೆಳಗಾವಿ 19.3 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು.