ಆಸ್ಟ್ರೇಲಿಯಾ ವಿರುದ್ಧ 6,ನ್ಯೂಜಿಲ್ಯಾಂಡ್ ವಿರುದ್ಧ 3, ಇಂಗ್ಲೆಂಡ್ ವಿರುದ್ಧ 3, ಇನ್ನುಳಿದಂತೆ ಶ್ರೀಲಂಕಾ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಬಾಂಗ್ಲಾದೇಶದ ವಿರುದ್ಧ ತಲಾ ಒಂದೊಂದು ಶತಕ ಬಾರಿಸಿದ್ದಾರೆ.
ಹೈದರಾಬಾದ್(ಫೆ.09): ಈಗಾಗಲೇ ಹಲವು ದಾಖಲೆಗಳನ್ನು ನಿರ್ಮಿಸಿರುವಭಾರತ ಕ್ರಿಕೆಟ್ ತಂಡದ ನಾಯಕ ಹಾಗೂ ಸ್ಫೋಟಕ ಬ್ಯಾಟ್ಸ್'ಮನ್ ವಿರಾಟ್ ಕೊಹ್ಲಿ ಮತ್ತೊಂದು ಹೊಸ ದಾಖಲೆ ನಿರ್ಮಿಸಿದ್ದಾರೆ. ತಾವು ಟೆಸ್ಟ್ ಆಡಿರುವ ಎಲ್ಲ ದೇಶಗಳ ವಿರುದ್ಧವೂ ಶತಕ ಬಾರಿಸಿದ್ದಾರೆ.
ವಿರಾಟ್ ಕೊಹ್ಲಿ ತಾವು ಟೆಸ್ಟ್ ಆಡಿರುವ 7 ದೇಶಗಳ ವಿರುದ್ಧ 16 ಶತಕ ಹೊಡೆದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ 6,ನ್ಯೂಜಿಲ್ಯಾಂಡ್ ವಿರುದ್ಧ 3, ಇಂಗ್ಲೆಂಡ್ ವಿರುದ್ಧ 3, ಇನ್ನುಳಿದಂತೆ ಶ್ರೀಲಂಕಾ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಬಾಂಗ್ಲಾದೇಶದ ವಿರುದ್ಧ ತಲಾ ಒಂದೊಂದು ಶತಕ ಬಾರಿಸಿದ್ದಾರೆ. ಟೆಸ್ಟ್ ಆಡುವ ಉಳಿದ ತಂಡಗಳಾದ ಪಾಕಿಸ್ತಾನ ಹಾಗೂ ಜಿಂಬಾಬ್ವೆ ವಿರುದ್ಧ ಒಂದು ಪಂದ್ಯವಾಡದ ಕಾರಣ ಆ ದೇಶಗಳ ವಿರುದ್ಧ ಶತಕ ಹೊಡೆದಿಲ್ಲ.
