ನಾನಾಗದಿದ್ದರೆ ಮತ್ಯಾರು ನಾಯಕನಾಗಲು ಸಾಧ್ಯ ಎಂದು ಕೊಹ್ಲಿ ನನ್ನ ಬಳಿ ಹೇಳಿದ್ದರು. ಅದು ಇಂದು ಸಾಧ್ಯವಾಗಿದೆ. ಆ ಅದ್ಬುತ ಆಟಗಾರನನ್ನ ಜಗತ್ತು ನೋಡುತ್ತಿದೆ. ಬಾಲ್ಯದಲ್ಲಿ ತುಂಬಾ ಇಷ್ಟಪಟ್ಟು ತಿನ್ನುತ್ತಿದ್ದ ಬಟರ್ ಚಿಕನ್, ಮಟನ್ ರೋಲ್`ಗಳು ಇಂದು ಅವರ ಆಹಾರದಲ್ಲಿಲ್ಲ. ಕ್ರಿಕೆಟ್`ಗಾಗಿ ಅವುಗಳನ್ನ ತ್ಯಜಿಸಿದ್ದಾರೆ. ಆಹಾರದಲ್ಲಿ ಅತ್ಯಂತ ಶಿಸ್ತು ಪಾಲಿಸುವ ಕೊಹ್ಲಿ ನನ್ನ ಮನೆಗೆ ಬಂದರೂ ಡಯಟ್ ಮಾತ್ರ ಬಿಡುವುದಿಲ್ಲ ಅಂತಾರೆ ಶರ್ಮಾ.

ನವದೆಹಲಿ(ಜ.18): ಕಳೆದ ಕೆಲ ವರ್ಷಗಳಲ್ಲಿ ವಿರಾಟ್ ಕೊಹ್ಲಿಯ ದೈಹಿಕ ಫಿಟ್ನೆಸ್`ನಲ್ಲಾದ ಅದ್ಬುತ ಬದಲಾವಣೆ ಅವರ ಅದ್ಬುತ ಆಟಕ್ಕೆ ಕಾರಣವಾಗಿದೆ. ಕೊಹ್ಲಿ ತನ್ನ ಫಿಟ್ನೆಸ್ ವಿಷಯದಲ್ಲಿ ಎಷ್ಟು ಬದ್ಧತೆಯಿಂದಿದ್ದಾರೆ ಎಂದರೆ ತಮಗಿಷ್ಟವಾದ ಬಟರ್ ಚಿಕನ್, ಮಟನ್ ರೋಲ್ ಅನ್ನೇ ಆಟಕ್ಕಾಗಿ ತ್ಯಾಗ ಮಾಡಿದ್ದಾರೆ ಅಂತಾರೆ ಚೈಲ್ಡ್`ಹುಡ್ ಕೋಚ್ ರಾಜಕುಮಾರ್ ಶರ್ಮಾ.