ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ವೇಳೆ ಕೊಹ್ಲಿಯಂತೆಯೇ ಕಾಣುವ ಅಭಿಮಾನಿಯೊಬ್ಬ ಸ್ಟೇಡಿಯಂನಲ್ಲಿ ಪ್ರತ್ಯಕ್ಷವಾಗಿದ್ದ. ಬಿಗ್ ಸ್ಕ್ರೀನ್`ನಲ್ಲಿ ತನ್ನ ಅಭಿಮಾನಿಯನ್ನ ಕಂಡ ಕೊಹ್ಲಿ ನಿಜಕ್ಕೂ ಬೆಕ್ಕಸ ಬೆರಗಾದರು.

ನವದೆಹಲಿ(ಅ.19): ಪ್ರಪಂಚದಲ್ಲಿ ಒಬ್ಬರ ರೀತಿಯೇ 7 ಮಂದಿ ಇರುತ್ತಾರೆ ಎಂಬ ಮಾತುಗಳನ್ನ ಕೇಳಿರುತ್ತೀರಿ. ಆದರೆ, ನಮ್ಮಂತೆಯೇ ಕಾಣುವ ವ್ಯಕ್ತಿಗಳನ್ನ ಪ್ರತ್ಯಕ್ಷವಾಗಿ ನೋಡಿರುವವರು ತುಂಬಾ ಕಡಿಮೆ. ಟೀಮ್ ಇಂಡಿಯಾದ ಟೆಸ್ಟ್ ಕ್ಯಾಪ್ಟನ್ ಕೊಹ್ಲಿಗೆ ಈ ಚಾನ್ಸ್ ಸಿಕ್ಕಿತ್ತು. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ವೇಳೆ ಕೊಹ್ಲಿಯಂತೆಯೇ ಕಾಣುವ ಅಭಿಮಾನಿಯೊಬ್ಬ ಸ್ಟೇಡಿಯಂನಲ್ಲಿ ಪ್ರತ್ಯಕ್ಷವಾಗಿದ್ದ. ಬಿಗ್ ಸ್ಕ್ರೀನ್`ನಲ್ಲಿ ತನ್ನ ಅಭಿಮಾನಿಯನ್ನ ಕಂಡ ಕೊಹ್ಲಿ ನಿಜಕ್ಕೂ ಬೆಕ್ಕಸ ಬೆರಗಾದರು.