Asianet Suvarna News Asianet Suvarna News

ದಾಖಲೆಗಳ ಸರದಾರನಾಗುವತ್ತ ಕೊಹ್ಲಿ ದಾಪುಗಾಲು..! 3ನೇ ಪಂದ್ಯದಲ್ಲಿ ಕೊಹ್ಲಿ ನಿರ್ಮಿಸಿದ ಇತಿಹಾಸಗಳಿವು

ಈ ಶತಕದ ನೆರವಿನಿಂದ ಟೀಂ ಇಂಡಿಯಾ 6 ಪಂದ್ಯಗಳ ಸರಣಿಯಲ್ಲಿ 3-0 ಅಂತರದ ಮುನ್ನಡೆ ಕಾಯ್ದುಕೊಳ್ಳುವಲ್ಲೂ ಸಫಲವಾಯಿತು.  ಇದು ಕೊಹ್ಲಿ ಪಾಲಿಗೆ ಮೂರನೇ 150+ ರನ್ ಕೂಡಾ ಹೌದು. ಕೊಹ್ಲಿ ಮೂರನೇ ಪಂದ್ಯದಲ್ಲಿ ನಿರ್ಮಿಸಿದ ಆಯ್ದ ದಾಖಲೆಗಳು ನಿಮ್ಮ ಮುಂದೆ..

Kohli is the King Records set by Virat Kohli during his 160 run knock in 3rd ODI

ನಾಯಕ ವಿರಾಟ್ ಕೊಹ್ಲಿ ಬುಟ್ಟಿಗೆ ಮತ್ತೊಂದು ಶತಕ ಸೇರ್ಪಡೆಯಾಗಿದೆ. ಆಫ್ರಿಕಾ ವಿರುದ್ಧ ಅಜೇಯ 160 ರನ್ ಸಿಡಿಸುವ ಮೂಲಕ ಏಕದಿನ ವೃತ್ತಿಜೀವನದ 34ನೇ ಶತಕ ಸಿಡಿಸಿದರು. ಅಲ್ಲದೇ ಈ ಶತಕದ ನೆರವಿನಿಂದ ಟೀಂ ಇಂಡಿಯಾ 6 ಪಂದ್ಯಗಳ ಸರಣಿಯಲ್ಲಿ 3-0 ಅಂತರದ ಮುನ್ನಡೆ ಕಾಯ್ದುಕೊಳ್ಳುವಲ್ಲೂ ಸಫಲವಾಯಿತು.  ಇದು ಕೊಹ್ಲಿ ಪಾಲಿಗೆ ಮೂರನೇ 150+ ರನ್ ಕೂಡಾ ಹೌದು. ಕೊಹ್ಲಿ ಮೂರನೇ ಪಂದ್ಯದಲ್ಲಿ ನಿರ್ಮಿಸಿದ ಆಯ್ದ ದಾಖಲೆಗಳು ನಿಮ್ಮ ಮುಂದೆ..

1. ನಾಯಕನಾದ ಬಳಿಕ ಏಕದಿನ ಕ್ರಿಕೆಟ್'ನಲ್ಲಿ ಕೊಹ್ಲಿ ಬಾರಿದ 12ನೇ ಶತಕವಿದು. ಈ ಶತಕದೊಂದಿಗೆ ಸೌರವ್ ಗಂಗೂಲಿ(11) ಹಿಂದಿಕ್ಕಿ ಅತಿಹೆಚ್ಚು ಶತಕ ಬಾರಿಸಿದ ಭಾರತೀಯ ನಾಯಕ ಎಂಬ ದಾಖಲೆ ನಿರ್ಮಿಸಿದ್ದಾರೆ. ಇದೀಗ ರಿಕಿ ಪಾಂಟಿಂಗ್ ಹಾಗೂ ಎಬಿ ಡಿವಿಲಿಯರ್ಸ್ ಅವರು ಕೊಹ್ಲಿಗಿಂತ ಮುಂದಿದ್ದಾರೆ.

2. ಕೊಹ್ಲಿ ಇದೀಗ ಅಂತರಾಷ್ಟ್ರೀಯ ಕ್ರಿಕೆಟ್'ನಲ್ಲಿ 55ನೇ ಶತಕ ದಾಖಲಿಸುವುದರೊಂದಿಗೆ 5ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಜತೆಗೆ ಹಾಶೀಂ ಆಮ್ಲಾ ಹಾಗೂ ಮಹೇಲಾ ಜಯವರ್ಧನೆ ಅವರನ್ನು ಹಿಂದಿಕ್ಕಿದ್ದಾರೆ.

3. ಕೊಹ್ಲಿ ಬಾರಿಸಿದ 160 ರನ್ ದಕ್ಷಿಣ ಆಫ್ರಿಕಾ ನೆಲದಲ್ಲಿ ಹರಿಣಗಳ ವಿರುದ್ಧ ಭಾರತೀಯ ಬ್ಯಾಟ್ಸ್'ಮನ್'ವೊಬ್ಬ ಬಾರಿಸಿದ ಗರಿಷ್ಠ ವೈಯುಕ್ತಿಕ ಮೊತ್ತವೆನಿಸಿದೆ.

4.ಕೊಹ್ಲಿ ಕೇವಲ 205ನೇ ಪಂದ್ಯದಲ್ಲಿ 34ನೇ ಶತಕ ಸಿಡಿಸಿದ್ದಾರೆ. ಇನ್ನು ಸಚಿನ್ ತೆಂಡುಲ್ಕರ್ 34 ಶತಕ ಸಿಡಿಸಲು 298 ಇನಿಂಗ್ಸ್ ತೆಗೆದುಕೊಂಡರೆ, ಕೊಹ್ಲಿ ಈ ಸಾಧನೆ ಮಾಡಲು ತೆಗೆದುಕೊಂಡ ಇನಿಂಗ್ಸ್'ಗಳ ಸಂಖ್ಯೆ ಕೇವಲ 197 ಮಾತ್ರ.

5. ಕೊಹ್ಲಿ ಏಕದಿನ ಕ್ರಿಕೆಟ್'ನಲ್ಲಿ 100 ಸಿಕ್ಸರ್ ಸಿಡಿಸಿದ್ದಾರೆ. ಈ ಮೂಲಕ 100ಕ್ಕೂ ಹೆಚ್ಚು ಸಿಕ್ಸರ್ ಸಿಡಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದ್ದಾರೆ. ಈ ಪಟ್ಟಿಯಲ್ಲಿ ಧೋನಿ(216) ಹಾಗೂ ರೋಹಿತ್ ಶರ್ಮಾ(165) ಮೊದಲೆರಡು ಸ್ಥಾನದಲ್ಲಿದ್ದಾರೆ.

6. ಕೊಹ್ಲಿ 100 ರನ್'ಗಳನ್ನು ಕೇವಲ ಸಿಂಗಲ್ಸ್, ಡಬಲ್ಸ್ ಹಾಗೂ ತ್ರಿಬಲ್ಸ್ ರನ್ ಓಡುವ ಮೂಲಕ 100 ರನ್ ಕಲೆಹಾಕಿದ ಮೊದಲ ಭಾರತೀಯ ಹಾಗೂ ವಿಶ್ವದ 5ನೇ ಬ್ಯಾಟ್ಸ್'ಮನ್ ಎನ್ನುವ ದಾಖಲೆಗೆ ಭಾಜನರಾದರು.    

7. ಕೊಹ್ಲಿ ಈಗಾಗಲೇ 318 ರನ್ ಸಿಡಿಸಿದ್ದು, ಆಫ್ರಿಕಾ ವಿರುದ್ಧದ ದ್ವಿಪಕ್ಷೀಯ ಏಕದಿನ ಸರಣಿಯಲ್ಲಿ ಪ್ರವಾಸಿ ತಂಡದ ಬ್ಯಾಟ್ಸ್'ಮನ್'ವೊಬ್ಬ ಕಲೆಹಾಕಿದ ಗರಿಷ್ಠ ಮೊತ್ತವೆನಿಸಿದೆ.

Follow Us:
Download App:
  • android
  • ios