ಇಲ್ಲಿನ ಗ್ಲೇಡ್ಸ್‌ ಮೈದಾನದಲ್ಲಿ ಆರಂಭಗೊಂಡ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಭಾರತ ‘ಎ’ ಮೊದಲ ದಿನದಂತ್ಯಕ್ಕೆ 3 ವಿಕೆಟ್‌ ನಷ್ಟಕ್ಕೆ 282 ರನ್‌ ಗಳಿಸಿದೆ. ಇನ್ನಿಂಗ್ಸ್‌ ಆರಂಭಿಸಿದ ರಾಹುಲ್‌ ಹಾಗೂ ಅಭಿಮನ್ಯು(117) ಮೊದಲ ವಿಕೆಟ್‌ಗೆ 178 ರನ್‌ ಜೊತೆಯಾಟವಾಡಿದರು.

ಮೈಸೂರು(ಫೆ.14): ಭಾರತ ತಂಡಕ್ಕೆ ವಾಪಸಾಗಲು ಎದುರು ನೋಡುತ್ತಿರುವ ಕರ್ನಾಟಕದ ಕೆ.ಎಲ್‌.ರಾಹುಲ್‌, ಇಂಗ್ಲೆಂಡ್‌ ಲಯನ್ಸ್‌ ವಿರುದ್ಧ ಇಲ್ಲಿ ನಡೆಯುತ್ತಿರುವ 2ನೇ ಅನಧಿಕೃತ ಟೆಸ್ಟ್‌ ಪಂದ್ಯದಲ್ಲಿ 81 ರನ್‌ ಗಳಿಸಿ ಔಟಾಗುವ ಮೂಲಕ ಶತಕ ಬಾರಿಸುವ ಅವಕಾಶ ಕೈಚೆಲ್ಲಿದರು. ಇದೇ ವೇಳೆ ಬಂಗಾಳದ ಯುವ ಆರಂಭಿಕ ಅಭಿಮನ್ಯು ಈಶ್ವರನ್‌ ಆಕರ್ಷಕ ಶತಕ ಬಾರಿಸಿ ಗಮನ ಸೆಳೆದರು.

ಮೈಸೂರಲ್ಲಿ ಭಾರತ ಎ -ಇಂಗ್ಲೆಂಡ್ ಲಯನ್ಸ್ ಅನಧಿಕೃತ ಟೆಸ್ಟ್

ಬುಧವಾರ ಇಲ್ಲಿನ ಗ್ಲೇಡ್ಸ್‌ ಮೈದಾನದಲ್ಲಿ ಆರಂಭಗೊಂಡ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಭಾರತ ‘ಎ’ ಮೊದಲ ದಿನದಂತ್ಯಕ್ಕೆ 3 ವಿಕೆಟ್‌ ನಷ್ಟಕ್ಕೆ 282 ರನ್‌ ಗಳಿಸಿದೆ. ಇನ್ನಿಂಗ್ಸ್‌ ಆರಂಭಿಸಿದ ರಾಹುಲ್‌ ಹಾಗೂ ಅಭಿಮನ್ಯು(117) ಮೊದಲ ವಿಕೆಟ್‌ಗೆ 178 ರನ್‌ ಜೊತೆಯಾಟವಾಡಿದರು. ಪ್ರಿಯಾಂಕ್‌ ಪಾಂಚಾಲ್‌ 50 ರನ್‌ ಗಳಿಸಿ ವಿಕೆಟ್‌ ಕಳೆದುಕೊಂಡರು. ಕರ್ನಾಟಕದ ಕರುಣ್‌ ನಾಯರ್‌ 14 ರನ್‌ ಗಳಿಸಿ ಅಜೇಯರಾಗಿ ಉಳಿದಿದ್ದು, 2ನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಸ್ಕೋರ್‌: (ಮೊದಲ ದಿನದಂತ್ಯಕ್ಕೆ) ಭಾರತ ‘ಎ’ ಮೊದಲ ಇನ್ನಿಂಗ್ಸ್‌ 282/3 
(ಅಭಿಮನ್ಯು 117, ರಾಹುಲ್‌ 81, ಬೈಲಿ 1-46)