ಬೆಂಗಳೂರು(ಮೇ.30) ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಹಾಗು ಪ್ರದರ್ಶನ ನೋಡಿದರೆ, ನಮಗೆ ಪ್ರಶಸ್ತಿ ಗೆಲ್ಲೋ ಅವಕಾಶ ದೂರವಿಲ್ಲ ಎಂದು ರಾಹುಲ್ ಹೇಳಿದ್ದಾರೆ. ಮುಂದಿನ ಐಪಿಎಲ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಚಾಂಪಿಯನ್ ಪಟ್ಟ ಅಲಂಕರಿಸಲಿದೆ ಎಂದು ರಾಹುಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಖಾಸಗಿ ವೆಬ್‌ಸೈಟ್‌ಗೆ ನೀಡಿದ ಸಂದರ್ಶನದಲ್ಲಿ ಮಾತತನಾಡಿದ ರಾಹುಲ್,  ಪಂಜಾಬ್ ತಂಡದ ಪ್ರತಿಯೊಬ್ಬ ಆಟಗಾರ ಗೆಲುವಿಗಾಗಿ ಕಠಿಣ ಪಯತ್ನ ಮಾಡಿದ್ದರು. ಆದರೆ ಪಂದ್ಯಗಳಲ್ಲಿ ನಾವು ನೈಜ ಆಟ ಪ್ರದರ್ಶಿಸುವಲ್ಲಿ ವಿಫಲರಾದೆವು. ಹೀಗಾಗಿ ಗೆಲುವು ಸಿಗಲಿಲ್ಲ ಎಂದು ರಾಹುಲ್ ಹೇಳಿದ್ದಾರೆ.

ಹನ್ನೊಂದನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಆದರೆ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಅದ್ಬುತ ಪ್ರದರ್ಶನದ ಮೂಲಕ ಗಮನಸೆಳೆದಿದ್ದಾರೆ. ಈ ಬಾರಿ ಐಪಿಎಲ್ ಟೂರ್ನಿಯಲ್ಲಿ ಕೆಎಲ್ ರಾಹುಲ್ ಟಾಪ್ ಫೈವ್ ರನ್ ಸ್ಕೋರರ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಮೊದಲ ಪಂದ್ಯದಲ್ಲೇ ರಾಹುಲ್ 14 ಎಸೆತದಲ್ಲಿ ಅರ್ಧಶತಕ ಸಿಡಿಸಿ ಅತೀವೇಗದ ಹಾಫ್ ಸೆಂಚುರಿ ದಾಖಲೆ ಬರೆದಿದ್ದಾರೆ. ಈ ಬಾರಿ ಆಡಿದ 14 ಪಂದ್ಯಗಳಿಂದ ರಾಹುಲ್, 659 ರನ್ ದಾಖಲಿಸಿದ್ದಾರೆ. ಅಜೇಯ 95 ರನ್ ರಾಹುಲ್ ಗರಿಷ್ಠ ಸ್ಕೋರ್. 38.44ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ ರಾಹುಲ್  10 ಅರ್ಧಶತಕ ಸಿಡಿಸಿದ್ದಾರೆ. 

ಭಾರತದ ಪರ ಕೆಎಲ್ ರಾಹುಲ್ 23 ಟೆಸ್ಟ್ ಪಂದ್ಯದಿಂದ 1458 ರನ್ ಸಿಡಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 4 ಅರ್ಧಶತಕಗಳು ದಾಖಲಿಸಿದ್ದಾರೆ.  10 ಏಕದಿನ ಪಂದ್ಯದಲ್ಲಿ 248 ರನ್ ಗಳಿಸಿದ್ದಾರೆ. ಚುಟುಕು ಕ್ರಿಕೆಟ್‌ನಲ್ಲಿ 15 ಪಂದ್ಯ ಆಡಿರುವ ರಾಹುಲ್ 500 ರನ್ ಸಿಡಿಸಿದ್ದಾರೆ.