ಮುಂಬೈ(ಫೆ.08): ಇರಾನಿ ಟ್ರೋಫಿಗಾಗಿ  ರೆಸ್ಟ್ ಆಫ್ ಇಂಡಿಯಾ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಭಾರತ ಎ ತಂಡವನ್ನ ಮುನ್ನಡೆಸುತ್ತಿದ್ದ ಅಜಿಂಕ್ಯ ರಹಾನೆಗೆ ರೆಸ್ಟ್ ಆಫ್ ಇಂಡಿಯಾ ತಂಡದ ನಾಯಕತ್ವ ನೀಡಲಾಗಿದೆ. ಹೀಗಾಗಿ ಸದ್ಯ ಭಾರತ ಎ ತಂಡದ ನಾಯಕತ್ವವನ್ನು ಕನ್ನಡಿಗ ಕೆ.ಎಲ್.ರಾಹುಲ್‌ಗೆ ನೀಡಲಾಗಿದೆ.

ರಣಜಿ ಟ್ರೋಫಿಯಲ್ಲಿ ವಿದರ್ಭ ಚಾಂಪಿಯನ್ ಆಗಿ ಹೊರಹೊಮ್ಮಿದೆ. ರಹಾನೆ ನಾಯಕತ್ವದ ರೆಸ್ಟ್ ಆಫ್ ಇಂಡಿಯಾ ತಂಡ, ಫೆಬ್ರವರಿ 12 ರಿಂದ ವಿದರ್ಭ ವಿರುದ್ಧ ಇರಾನಿ ಟ್ರೋಫಿ ಆಡಲಿದೆ. ಇತ್ತ ರಾಹುಲ್ ನಾಯಕತ್ವದ ಭಾರತ ಎ ತಂಡ, ಇಂಗ್ಲೆಂಡ್ ಲಯನ್ಸ್ ವಿರುದ್ಧ 4 ದಿನಗಳ ಟೆಸ್ಟ್ ಪಂದ್ಯ ಆಡಲಿದೆ.

ಭಾರತ ಎ ತಂಡ:
ಕೆ.ಎಲ್.ರಾಹುಲ್(ನಾಯಕ), ಅಭಿಮನ್ಯು ಈಶ್ವರನ್, ಪ್ರಿಯಾಂಕ್ ಪಾಂಚಾಲ್, ಅಂಕಿತ್ ಭಾವ್ನೆ, ಕರುಣ್ ನಾಯರ್, ರಿಕಿ ಭುಯಿ, ಸಿದ್ದೇಶ್ ಲಾಡ್, ಕೆ.ಎಸ್.ಭರತ್, ಶಹಭಾಝ್ ನದೀಮ್, ಜಲಜ್ ಸಕ್ಸೇನಾ, ಮಯಾಂಕ್ ಮಾರ್ಕಂಡೆ, ಶಾರ್ದೂಲ್ ಠಾಕೂರ್, ನವದೀಪ್ ಸೈನಿ, ವರಣ್ ಆರೋನ್

ರೆಸ್ಟ್ ಆಫ್ ಇಂಡಿಯಾ:
ಅಜಿಂಕ್ಯ ರಹಾನೆ(ನಾಯಕ), ಮಯಾಂಕ್ ಅಗರ್ವಾಲ್, ಅನ್ಮೋಲ್‌ಪ್ರೀತ್ ಸಿಂಗ್, ಹನುಮಾ ವಿಹಾರಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಕೆ.ಗೌತಮ್, ಧರ್ಮೇಂದ್ರಸಿನ್ ಜಡೇಜಾ, ರಾಹುಲ್ ಚಹಾಲ್, ಅಕಿಂತ್ ರಜಪೂತ್, ತನ್ವೀರ್ ಉಲ್ ಹಕ್, ರೋನಿತ್ ಮೊರೆ, ಸಂದೀಪ್ ವಾರಿಯರ್, ರಿಂಕು ಸಿಂಗ್, ಸ್ನೆಲ್ ಪಟೇಲ್