ಓಲ್ಡ್ ಟ್ರಾಫೋರ್ಡ್(ಜು.04): ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಭರ್ಜರಿ ಶತಕ ಸಿಡಿಸಿದ್ದಾರೆ. ಈ ಮೂಲಕ ಚುಟುಕು ಕ್ರಿಕೆಟ್‌ನಲ್ಲಿ 2ನೇ ಸೆಂಚುರಿ ದಾಖಲಿಸಿದ್ದಾರೆ.

ಆರಂಭದಲ್ಲೇ ಶಿಖರ್ ಧವನ್ ವಿಕೆಟ್ ಕಳೆದುಕೊಂಡು ಆತಂಕ ಎದುರಿಸಿದ ತಂಡಕ್ಕೆ ಕೆಎಲ್ ರಾಹುಲ್ ಸ್ಫೋಟಕ ಇನ್ನಿಂಗ್ಸ್ ವರದಾನವಾಯಿತು.  27 ಎಸೆತದಲ್ಲಿ ರಾಹುಲ್ 5 ಬೌಂಡರಿ ಹಾಗೂ 2 ಸಿಕ್ಸರ್ ನೆರವಿಂದ ಆಕರ್ಷಕ ಅರ್ಧಶತಕ ಸಿಡಿಸಿದರು. 

ಹಾಫ್ ಸೆಂಚುರಿ ಬಳಿಕ ರಾಹುಲ್ ಅಬ್ಬರ ಮತ್ತಷ್ಟು ಹೆಚ್ಚಾಯಿತು. 53 ಎಸೆತದಲ್ಲಿ 10 ಬೌಂಡರಿ ಹಾಗೂ 5 ಭರ್ಜರಿ ಸಿಕ್ಸರ್ ನೆರವಿನಿಂದ ರಾಹುಲ್ ಸೆಂಚುರಿ ಬಾರಿಸಿದರು. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ ರಾಹುಲ್ 2ನೇ ಶತಕ ಸಿಡಿಸಿದ ಹೆಗ್ಗಳಿಕೆಗೆ ಪಾತ್ರರಾದರು.