ಕಿಂಗ್ಸ್ XI ಪಂಜಾಬ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ (ಮೇ.4), ರಾಜಸ್ತಾನ ರಾಯಲ್ಸ್(ಮೇ.6), ಕೊಲ್ಕತಾ ನೈಟ್'ರೈಡರ್ಸ್(ಮೇ.12) ಹಾಗೂ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡದ ಎದುರು ಮೇ.14 ರಂದು ಇಂದೋರ್'ನಲ್ಲಿ ಸೆಣಸಲಿದೆ.

ಮುಂಬೈ(ಮಾ.21): ಐಪಿಎಲ್ 11ನೇ ಆವೃತ್ತಿಯ ಎಲಿಮಿನೇಟರ್ ಹಾಗೂ 2ನೇ ಕ್ವಾಲಿಫೈಯರ್ ಪಂದ್ಯಗಳಿಗೆ ಪುಣೆ ಆತಿಥ್ಯ ವಹಿಸಲಿದೆ.

ಐಪಿಎಲ್ ಆಡಳಿತ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು ಎಂದು ಬಿಸಿಸಿಐ ತಿಳಿಸಿದೆ. ಇದೇ ವೇಳೆ ಕಿಂಗ್ಸ್ ಇಲೆವೆನ್ ತಂಡ ತನ್ನ ಮೊದಲ ಮೂರು ತವರಿನ ಪಂದ್ಯಗಳನ್ನು ಮೊಹಾಲಿಯಲ್ಲಿ ಆಡಲಿದ್ದು, ನಂತರದ ನಾಲ್ಕು ಪಂದ್ಯಗಳನ್ನು ಇಂದೋರ್‌'ನಲ್ಲಿ ಆಡಲಿದೆ.

ಕಿಂಗ್ಸ್ XI ಪಂಜಾಬ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ (ಮೇ.4), ರಾಜಸ್ತಾನ ರಾಯಲ್ಸ್(ಮೇ.6), ಕೊಲ್ಕತಾ ನೈಟ್'ರೈಡರ್ಸ್(ಮೇ.12) ಹಾಗೂ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡದ ಎದುರು ಮೇ.14 ರಂದು ಇಂದೋರ್'ನಲ್ಲಿ ಸೆಣಸಲಿದೆ.

ಇದನ್ನೂ ಓದಿ:

ಮೇ ತಿಂಗಳಲ್ಲಿ ಚಂಡೀಗಢ ವಿಮಾನ ನಿಲ್ದಾಣದ ದುರಸ್ಥಿ ಕಾರ್ಯ ನಡೆಯಲಿರುವುದರಿಂದ ವೇಳಾಪಟ್ಟಿ ಬದಲಿಸಲು ಕಿಂಗ್ಸ್ ತಂಡ ಮನವಿ ಮಾಡಿತ್ತು.