ಮಧ್ಯಮ ಕ್ರಮಾಂಕದಲ್ಲಿ ನಿತೀಶ್‌ ರಾಣಾ (53: 36 ಎಸೆತ, 4 ಬೌಂಡರಿ, 2 ಸಿಕ್ಸರ್‌) ಮತ್ತು ನಾಯಕ ರೋಹಿತ್‌ ಶರ್ಮ ಅಜೇಯ (40: 29 ಎಸೆತ, 3 ಬೌಂಡರಿ, 1 ಸಿಕ್ಸರ್‌) ಅವರ ಭರ್ಜರಿ ಬ್ಯಾಟಿಂಗ್‌ ನೆರವಿನಿಂದ ಮುಂಬೈ ಇಂಡಿಯನ್ಸ್‌ ತಂಡ, ಐಪಿಎಲ್‌ 10ನೇ ಆವೃತ್ತಿಯ 16ನೇ ಪಂದ್ಯದಲ್ಲಿ ಗುಜರಾತ್‌ ಲಯನ್ಸ್‌ ಎದುರು 6 ವಿಕೆಟ್‌ಗಳ ಗೆಲುವು ದಾಖಲಿಸಿದೆ. ಇದರೊಂದಿಗೆ ಮುಂಬೈ ತಂಡ 8 ಅಂಕಗಳಿಸಿ ಪಟ್ಟಿಯಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿದೆ. 

ಮುಂಬೈ ಇಂಡಿಯನ್ಸ್‌ ತಂಡದ ವೇಗಿ ಲಸಿತ್‌ ಮಾಲಿಂಗ, ಲಯನ್ಸ್‌ ವಿರುದ್ಧದ ಪಂದ್ಯದಲ್ಲಿ 4 ಓವರ್‌ಗಳಲ್ಲಿ 51ರನ್‌ ಬಿಟ್ಟು ಕೊಟ್ಟರು. 2012ರ ಟಿ20 ವಿಶ್ವಕಪ್‌ನಲ್ಲಿ ಮಾಲಿಂಗ 54ರನ್‌ ಬಿಟ್ಟುಕೊಟ್ಟಿದ್ದರು. ಟರ್ನಿಂಗ್‌ ಪಾಯಿಂಟ್‌
ಮುಂಬೈ ತನ್ನ ಇನಿಂಗ್ಸ್‌ ನಲ್ಲಿ 92ರನ್‌ಗಳಿಗೆ ಅಗ್ರ ಕ್ರಮಾಂಕದ ಪ್ರಮುಖ 3 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಜತೆಯಾದ ಕೀರಾನ್‌ ಪೊಲ್ಲಾರ್ಡ್‌, ರೋಹಿತ್‌ ಶರ್ಮ ನಿಧಾನಗತಿಯ ಬ್ಯಾಟಿಂಗ್‌ ನಡೆಸಿದರು. ಒಂದೊಮ್ಮೆ ಈ ಇಬ್ಬರೂ ಆಟಗಾರರು ಕೆಟ್ಟಹೊಡೆತಕ್ಕೆ ಕೈ ಹಾಕಿ ವಿಕೆಟ್‌ ಒಪ್ಪಿಸಿದ್ದರೆ, ಮುಂಬೈ ಗೆಲುವು ಅಸಾಧ್ಯವಾಗಿತ್ತು. ಈ ಜತೆಯಾಟ ಪಂದ್ಯಕ್ಕೆ ಮಹತ್ವದ ತಿರುವು ನೀಡಿತು. 
ಮಧ್ಯಮ ಕ್ರಮಾಂಕದಲ್ಲಿ ನಿತೀಶ್‌ ರಾಣಾ (53: 36 ಎಸೆತ, 4 ಬೌಂಡರಿ, 2 ಸಿಕ್ಸರ್‌) ಮತ್ತು ನಾಯಕ ರೋಹಿತ್‌ ಶರ್ಮ ಅಜೇಯ (40: 29 ಎಸೆತ, 3 ಬೌಂಡರಿ, 1 ಸಿಕ್ಸರ್‌) ಅವರ ಭರ್ಜರಿ ಬ್ಯಾಟಿಂಗ್‌ ನೆರವಿನಿಂದ ಮುಂಬೈ ಇಂಡಿಯನ್ಸ್‌ ತಂಡ, ಐಪಿಎಲ್‌ 10ನೇ ಆವೃತ್ತಿಯ 16ನೇ ಪಂದ್ಯದಲ್ಲಿ ಗುಜರಾತ್‌ ಲಯನ್ಸ್‌ ಎದುರು 6 ವಿಕೆಟ್‌ಗಳ ಗೆಲುವು ದಾಖಲಿಸಿದೆ. ಇದರೊಂದಿಗೆ ಮುಂಬೈ ತಂಡ 8 ಅಂಕಗಳಿಸಿ ಪಟ್ಟಿಯಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿದೆ. 
ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್‌ ಸೋತರೂ ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಗುಜರಾತ್‌ ಲಯನ್ಸ್‌ ತಂಡ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 176ರನ್‌ಗಳಿಸಿತು. ನಂತರ ಬ್ಯಾಟಿಂಗ್‌ ಮಾಡಿದ ಮುಂಬೈ 19.3 ಓವರ್‌ಗಳಲ್ಲಿ 4 ವಿಕೆಟ್‌ಗೆ 177ರನ್‌ಗಳಿಸಿ ಗೆಲುವಿನ ನಗೆ ಬೀರಿತು. 
ಸವಾಲಿನ ಗುರಿ ಬೆನ್ನಟ್ಟಿದ ಮುಂಬೈ ತಂಡ ಖಾತೆ ತೆರೆಯುವ ಮುನ್ನವೇ, ಇನ್ನಿಂಗ್ಸ್‌ನ 2ನೇ ಎಸೆತದಲ್ಲಿ ಪಾರ್ಥೀವ್‌ ಪಟೇಲ್‌ (0) ವಿಕೆಟ್‌ ಪಡೆಯುವ ಮೂಲಕ ಲಯನ್ಸ್‌ನ ವೇಗಿ ಪ್ರವೀಣ್‌ ಕುಮಾರ್‌ ಆತಿಥೇಯರಿಗೆ ಆರಂಭಿಕ ಆಘಾತ ನೀಡಿದರು. ಬಳಿಕ ಬಟ್ಲರ್‌ ಮತ್ತು ನಿತೀಶ್‌ ರಾಣಾ ತಾಳ್ಮೆಯ ಬ್ಯಾಟಿಂಗ್‌ನಿಂದ ತಂಡಕ್ಕೆ ಚೇತರಿಕೆ ನೀಡಿದರು. ಜಾಸ್‌ ಬಟ್ಲರ್‌ (26)ರನ್‌ಗಳಿಸಿದರೆ, ರಾಣಾ ಆಕರ್ಷಕ ಅರ್ಧಶತಕ ಸಿಡಿಸಿ ತಂಡದ ಮೊತ್ತ ಹೆಚ್ಚಿಸಿದರು. ಈ ಮೂಲಕ ರಾಣಾ ಆಡಿರುವ 5 ಪಂದ್ಯಗಳಲ್ಲಿ 2 ಅರ್ಧಶತಕದೊಂದಿಗೆ 193ರನ್‌ಗಳಿಸಿ ಅತಿ ಹೆಚ್ಚು ರನ್‌ಗಳಿಸಿದ ಬ್ಯಾಟ್ಸ್‌ಮನ್‌ ಎನಿಸಿದರು. ಕೊನೆಯಲ್ಲಿ ರೋಹಿತ್‌ ಶರ್ಮ ಹಾಗೂ ಪೊಲ್ಲರ್ಡ್‌ ವೇಗದ ಬ್ಯಾಟಿಂಗ್‌ ಮೂಲಕ ಗಮನಸೆಳೆದರು. 
ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ಗುಜರಾತ್‌ ಲಯನ್ಸ್‌ ಪರ ಬ್ರೆಂಡನ್‌ ಮೆಕ್ಕಲಂ (64), ನಾಯಕ ಸುರೇಶ್‌ ರೈನಾ (28) ಮತ್ತು ಕೊನೆಯಲ್ಲಿ ದಿನೇಶ್‌ ಕಾರ್ತಿಕ್‌ (48) ಅವರ ಅದ್ಭುತ ಬ್ಯಾಟಿಂಗ್‌ ಪ್ರದರ್ಶನದಿಂದ ಸವಾಲಿನ ಮೊತ್ತಕ್ಕೆ ಕಾರಣರಾದರು. ಮುಂಬೈ ಪರ ಮೆಕ್ಲೆನಾಘನ್‌ 2, ಮಾಲಿಂಗ ಮತ್ತು ಹರ್ಭಜನ್‌ ಸಿಂಗ್‌ ತಲಾ 1 ವಿಕೆಟ್‌ ಪಡೆದರು.


ಸಂಕ್ಷಿಪ್ತ ಸ್ಕೋರ್‌:

ಗುಜರಾತ್‌ ಲಯನ್ಸ್‌ : 20 ಓವರ್‌ಗಳಲ್ಲಿ 4 ವಿಕೆಟ್‌ಗೆ 176 (ಮೆಕ್ಕಲಂ 64, ಕಾರ್ತಿಕ್‌ ಅಜೇಯ 48, ಮೆಕ್ಲೆನಾಘನ್‌ 24ಕ್ಕೆ 2)
ಮುಂಬೈ ಇಂಡಿಯನ್ಸ್‌: 19.3 ಓವರ್‌ಗಳಲ್ಲಿ 4 ವಿಕೆಟ್‌ಗೆ 177 ( ರಾಣಾ 53, ರೋಹಿತ್‌ ಅಜೇಯ 40, ಟೈ 34ಕ್ಕೆ 2)
ಪಂದ್ಯ ಶ್ರೇಷ್ಠ: ನಿತೀಶ್‌ ರಾಣಾ (ಮುಂಬೈ ಇಂಡಿಯನ್ಸ್‌)