ಆಂಧ್ರಪ್ರದೇಶದ ಕಿದಂಬಿ ಶ್ರೀಕಾಂತ್ ವಿಶ್ವದ ಬಹುತೇಕ ದಿಗ್ಗಜರನ್ನು ಸೋಲಿಸಿದಂತಾಗಿದೆ. ಈ ಮುಂಚೆ ಸಿಂಗಾಪುರ ಮತ್ತು ಇಂಡೋನೇಷ್ಯಾ ಸೂಪರ್ ಸೀರೀಸ್ ಟೂರ್ನಿಗಳನ್ನು ಜಯಿಸಿದ್ದ ಶ್ರೀಕಾಂತ್ ಅವರು ವಿಶ್ವದ ನಂಬರ್ ಒನ್ ಆಟಗಾರ ಸೋನ್ ವ್ಯಾನ್ ಹೋ ಅವರನ್ನು ಎರಡು ಬಾರಿ ಮಣಿಸಿದ್ದಾರೆ.

ಸಿಡ್ನಿ(ಜೂನ್ 25): ಭಾರತದ ಕಿದಂಬಿ ಶ್ರೀಕಾಂತ್ ಆಸ್ಟ್ರೇಲಿಯನ್ ಓಪನ್ ಸೂಪರ್ ಸೀರೀಸ್ ಚಾಂಪಿಯನ್ ಆಗಿದ್ದಾರೆ. ಈ ಮೂಲಕ ಸತತ ಮೂರು ಸೂಪರ್ ಸೀರೀಸ್ ಟೂರ್ನಿಗಳು ಭಾರತೀಯನ ಪಾಲಾಗಿವೆ. ಇಂದು ನಡೆದ ಪುರುಷರ ಸಿಂಗಲ್ಸ್ ಫೈನಲ್'ನಲ್ಲಿ ಚೀನಾದ ಪ್ರಬಲ ಎದುರಾಳಿ ಚೆನ್ ಲೋಂಗ್ ಅವರನ್ನು 22-20, 21-16 ನೇರ ಗೇಮ್'ಗಳಿಂದ ರೋಚಕ ಗೆಲುವು ಸಾಧಿಸಿದ್ದಾರೆ. ಕೆ.ಶ್ರೀಕಾಂತ್ ಅವರ ವೃತ್ತಿಜೀವನದಲ್ಲಿ ಚೆನ್ ಲೋಂಗ್ ವಿರುದ್ಧ ಗೆಲುವು ಸಾಧಿಸಿದ್ದು ಇದೇ ಮೊದಲು. ಒಲಿಂಪಿಕ್ ಚಾಂಪಿಯನ್ ಚೆನ್ ಲೋಂಗ್ ಈ ಮೊದಲು ಆಡಿದ್ದ ಎಲ್ಲಾ ಐದು ಪಂದ್ಯಗಳಲ್ಲೂ ಜಯಭೇರಿ ಸಾಧಿಸಿದ್ದರು. ಆದರೆ, ಇತ್ತೀಚಿನ ದಿನಗಳಿಂದ ಅದ್ಭುತ ಫಾರ್ಮ್'ನಲ್ಲಿರುವ ಕಿಡಂಬಿ ಶ್ರೀಕಾಂತ್ ಅವರನ್ನ ತಡೆಯುವ ಶಕ್ತಿ ಚೆನ್ ಲೋಂಗ್'ಗಿರಲಿಲ್ಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆಂಧ್ರಪ್ರದೇಶದ ಕಿದಂಬಿ ಶ್ರೀಕಾಂತ್ ವಿಶ್ವದ ಬಹುತೇಕ ದಿಗ್ಗಜರನ್ನು ಸೋಲಿಸಿದಂತಾಗಿದೆ. ಈ ಮುಂಚೆ ಸಿಂಗಾಪುರ ಮತ್ತು ಇಂಡೋನೇಷ್ಯಾ ಸೂಪರ್ ಸೀರೀಸ್ ಟೂರ್ನಿಗಳನ್ನು ಜಯಿಸಿದ್ದ ಶ್ರೀಕಾಂತ್ ಅವರು ವಿಶ್ವದ ನಂಬರ್ ಒನ್ ಆಟಗಾರ ಸೋನ್ ವ್ಯಾನ್ ಹೋ ಅವರನ್ನು ಎರಡು ಬಾರಿ ಮಣಿಸಿದ್ದಾರೆ. ಚೀನಾದ ಟಾಪ್ ಆಟಗಾರ ಶೀ ಯುಕಿ ಅವರನ್ನೂ ಎರಡು ಬಾರಿ ಸೋಲಿ ಪಾರಮ್ಯ ಮೆರೆದಿರುವ ಕಿಡಂಬಿ ಶ್ರೀಕಾಂತ್ ವಿಶ್ವದ ನಂಬರ್ ಒನ್ ಆಟಗಾರನಾಗುವ ನಿರೀಕ್ಷೆ ಹುಟ್ಟಿಸಿದ್ದಾರೆ.