2017ರಲ್ಲಿ ಶ್ರೀಕಾಂತ್‌'ಗಿದು 3ನೇ ಸೂಪರ್ ಸೀರೀಸ್ ಪ್ರಶಸ್ತಿಯಾಗಿದೆ.

ಒಡೆನ್ಸಿ(ಅ.23): ಭಾರತದ ಅನುಭವಿ ಶಟ್ಲರ್ ಕಿದಾಂಬಿ ಶ್ರೀಕಾಂತ್ ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಪುರುಷರ ಸಿಂಗಲ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪ್ರಚಂಡ ಲಯದಲ್ಲಿರುವ ವಿಶ್ವ ನಂ.8 ಆಟಗಾರ, ಫೈನಲ್ ಪಂದ್ಯದಲ್ಲಿ ದ.ಕೊರಿಯಾದ ಲೀ ಹ್ಯುನ್ ವಿರುದ್ಧ 21-10, 21-5 ಗೇಮ್‌'ಗಳ ಸುಲಭ ಗೆಲುವು ಸಾಧಿಸಿದರು.

2017ರಲ್ಲಿ ಶ್ರೀಕಾಂತ್‌'ಗಿದು 3ನೇ ಸೂಪರ್ ಸೀರೀಸ್ ಪ್ರಶಸ್ತಿಯಾಗಿದೆ. ಈ ವರ್ಷ ಇಂಡೋನೇಷ್ಯಾ ಹಾಗೂ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆದ್ದಿದ್ದ ಶ್ರೀಕಾಂತ್, ಒಂದು ವರ್ಷದಲ್ಲಿ 3 ಸೂಪರ್ ಸೀರೀಸ್ ಗೆದ್ದ ಭಾರತದ 2ನೇ ಶಟ್ಲರ್ ಎನಿಸಿಕೊಂಡರು.