ಕಿಕ್ ಬಾಕ್ಸಿಂಗ್‌ನಲ್ಲಿ ಜಯಗಳಿಸಿರುವ ತೇಜಸ್ವಿನಿ ಮೈಸೂರಿನ ಕೆ. ವಿಜಯಕುಮಾರ್ ಅವರ ಬಳಿ ತರಬೇತಿ ಪಡೆಯುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುವ ಆಶಾಭಾವನೆ ಹೊಂದಿದ್ದಾರೆ.

ಹುಣಸೂರು(ಅ.19): ಕರ್ನಾಟಕ ಕಿಕ್ ಬಾಕ್ಸಿಂಗ್ ಅಸೋಸಿಯೇಷನ್ ವತಿಯಿಂದ ಮೈಸೂರಿನಲ್ಲಿ ನಡೆದ ರಾಜ್ಯ ಮಟ್ಟದ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಎ. ತೇಜಸ್ವಿನಿ ಪ್ರಥಮ ಸ್ಥಾನಗಳಿಸಿ, ನವೆಂಬರ್‌ನಲ್ಲಿ ನಡೆಯುವ ರಾಷ್ಟ್ರಮಟ್ಟದ ಕಿಕ್ ಬಾಕ್ಸಿಂಗ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಕಿಕ್ ಬಾಕ್ಸಿಂಗ್‌ನಲ್ಲಿ ಜಯಗಳಿಸಿರುವ ತೇಜಸ್ವಿನಿ ಮೈಸೂರಿನ ಕೆ. ವಿಜಯಕುಮಾರ್ ಅವರ ಬಳಿ ತರಬೇತಿ ಪಡೆಯುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುವ ಆಶಾಭಾವನೆ ಹೊಂದಿದ್ದಾರೆ.

ಈಕೆ ಪಟ್ಟಣದ ನಾಗಭೂಷಣ್ ಹಾಗೂ ಕಮಲಮ್ಮ ಅವರ ಪುತ್ರಿ. ಅಸೋಸಿಯೆಷನ್ ಪ್ರಧಾನ ಕಾರ್ಯದರ್ಶಿ ಸಿ. ರವಿ, ಸಂಘಟನಾ ಕಾರ್ಯದರ್ಶಿ ಎಕ್ಸೆಲ್ ಜೋಸ್, ಟೆಕ್ನಿಕಲ್ ಛೇರ್ಮನ್ ಹಾಗೂ ತರಬೇತುದಾರ ವಿಜಯಕುಮಾರ್ ಅಭಿನಂದಿಸಿದ್ದಾರೆ.