Khelo India University Games ಕಷ್ಟಗಳ ಈಜಿ ಚಿನ್ನ ಗೆಲ್ಲುವ ಕನ್ನಡಿಗ ಶಿವ!
ಚೀನಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸುವ ಗುರಿ ಹೊಂದಿರುವ ಶಿವ 100 ಮೀ. ಬ್ಯಾಕ್ ಸ್ಟ್ರೋಕ್ ನಲ್ಲಿ ಅರ್ಹತೆ ಪಡೆಯುವ ಆಶಯ ವ್ಯಕ್ತಪಡಿಸಿದ್ದಾರೆ. ಆದರೆ ಅರ್ಹತೆ ಹೊಂದಬೇಕಾದರೆ ಅವರು, 55.8 ಸೆಕೆಂಡುಗಳ ಒಳಗಾಗಿ ಗುರಿ ಮುಟ್ಟಬೇಕಾದ ಅಗತ್ಯವಿದೆ.
ಬೆಂಗಳೂರು (ಏ.25): ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ನಲ್ಲಿ(Khelo India University Games ) ಆತಿಥೇಯ ಜೈನ್ ವಿಶ್ವವಿದ್ಯಾನಿಲಯವನ್ನು(Jain VV) ಪ್ರತಿನಿಧಿಸುತ್ತಿರುವ ಶಿವ ಶ್ರೀಧರ್ (Siva Sridhar) 200 ಮೀ. ವೈಯಕ್ತಿಕ ಮೆಡ್ಲೆ ವಿಭಾಗದಲ್ಲಿ ನೂತನ ಕೂಟ ದಾಖಲೆಯನ್ನು ನಿರ್ಮಿಸಿದ್ದು, ಈ ಸಾಧನೆ ಮುಂದಿನ ಏಷ್ಯನ್ ಗೇಮ್ಸ್ ಅರ್ಹತಾ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ತೋರಲು ನೆರವಾಗಲಿದೆ ಎಂದಿದ್ದಾರೆ. ಕಷ್ಟಗಳ ಈಜಿ ಚಿನ್ನ ಗೆಲ್ಲುವ ಶಿವನಿಗೆ ಉತ್ತಮ ಪ್ರೋತ್ಸಾಹದ ಅಗತ್ಯವಿದೆ.
ಕಳೆದ ಚಾಂಪಿಯನ್ ಷಿಪ್ ನಲ್ಲಿ ಉತ್ತಮ ಪ್ರದರ್ಶನ ತೊರಿರುವ ಜೈನ್ ವಿಶ್ವವಿದ್ಯಾನಿಲಯ ಈ ಬಾರಿ ಅತಿ ಹೆಚ್ಚು ಪದಕಗಳನ್ನು ಗೆದ್ದು ಅಗ್ರ ಸ್ಥಾನವನ್ನು ಗಳಿಸುವ ಗುರಿಹೊಂದಿದೆ, ಆ ಗುರಿ ತಲುಪುವಲ್ಲಿ ಶಿವ ಆವರ ಪಾತ್ರ ಪ್ರಮುಖವಾಗಿದೆ, “ಹೆಚ್ಚು ಪದಕಗಳನ್ನು ಗೆಲ್ಲಬೇಕೆಂಬ ಒತ್ತಡ ನಿಜವಾಗಿಯೂ ನನ್ನ ಮೇಲೆ ಇದೆ. ನಮಗೆ ವಿದ್ಯಾರ್ಥಿ ವೇತನ ನೀಡಿ ಶಿಕ್ಷಣ ನೀಡುತ್ತಿರುವ ವಿಶ್ವವಿದ್ಯಾನಿಲಯ ನಮ್ಮಿಂದ ಪದಕಗಳನ್ನು ನಿರೀಕ್ಷಿಸುತ್ತದೆ. ಇದರಿಂದಾಗಿ ಉತ್ತಮ ಪ್ರದರ್ಶನ ನೀಡಬೇಕೆಂಬ ಒತ್ತಡ ಸಹಜವಾಗಿಯೆ ನಿರ್ಮಾಣವಾಗುತ್ತದೆ,” ಎಂದರು. ಶಿವ ಈ ಬಾರಿಯ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ನಲ್ಲಿ 50, 100 ಮತ್ತು 200 ಮೀ. ಬ್ಯಾಕ್ ಸ್ಟ್ರೋಕ್ 200 ಮತ್ತು 400ಮೀ ವೈಯಕ್ತಿಕ ಮೆಡ್ಲೆ ಮತ್ತು 100 ಮೀ ಬಟರ್ ಫ್ಲೈ ಮತ್ತು 100 ಮೀ ಬ್ರೆಸ್ಟ್ ಸ್ಟ್ರೋಕ್ ನಲ್ಲಿ ಸ್ಪರ್ಧಿಸಲಿದ್ದಾರೆ.
ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ ಶಿವ, ಸಾಕಷ್ಟು ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತ ಈಜಿನಲ್ಲಿ ಯಶಸ್ಸು ಕಾಣುತ್ತಿದ್ದಾರೆ. ಶಿವ ಅವರ ತಂದೆ ಪಾರ್ಶ್ವವಾಯುವಿಗೆ ತುತ್ತಾದ ಕಾರಣ ಕೆಲಸದಿಂದ ನಿವೃತ್ತಿ ಹೊಂದಬೇಕಾಯಿತು. “ಮನೆಯಲ್ಲಿ ದುಡಿಯವವರು ಯಾರೂ ಇಲ್ಲ. ತಂದೆ ಪಾರ್ಶ್ವವಾಯುವಿಗೆ ತುತ್ತಾಗಿ ಕೆಲಸದಿಂದ ನಿವೃತ್ತಿ ಹೊಂದಬೇಕಾಯಿತು. ಈ ಕ್ರೀಡೆಗೆ ಹೆಚ್ಚು ಹಣ ವ್ಯಯಮಾಡಬೇಕಾಗಿರುವುದರಿಂದ ಗುರಿ ತಲುಪಲು ಸಾಕಷ್ಟು ಕಷ್ಟವಾಗುತ್ತಿದೆ. ಆದರೆ ನನಗೆ ಬಸವನಗುಡಿ ಈಜ ಕೇಂದ್ರದಿಂದ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ಸಿಗುತ್ತಿದೆ. ಅವರು ನನ್ನ ತರಬೇತಿಗೆ ಅಗತ್ಯವಿರುವ ಎಲ್ಲವನ್ನೂ ನೀಡುತ್ತಿದ್ದಾರೆ, ಜೈನ್ ಕಾಲೇಜು ಎಂಬಿಎ ಪದವಿ ಗಳಿಸಲು ನೆರವಾಗುತ್ತಿದೆ. ಈ ರೀತಿಯ ಪ್ರೋತ್ಸಾಹ ಸಿಗಲಿಲ್ಲವೆಂದರೆ ಈಜಿನಲ್ಲಿ ತೊಡಗಿಕೊಂಡು ಪದವಿ ಗಳಿಸುವುದು ಕಷ್ಟವಾಗಗುತ್ತಿತ್ತು” ಎಂದರು.
66 ವರ್ಷದ ಮಾಜಿ ಕ್ರಿಕೆಟಿಗ ಅರುಣ್ ಲಾಲ್ ಗೆ 2ನೇ ಮದುವೆ, 38 ವರ್ಷದ ಬುಲ್ ಬುಲ್ ವಧು!
ಚೀನಾದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸುವ ಗುರಿ ಹೊಂದಿರುವ ಶಿವ 100 ಮೀ. ಬ್ಯಾಕ್ ಸ್ಟ್ರೋಕ್ ನಲ್ಲಿ ಅರ್ಹತೆ ಪಡೆಯುವ ಆಶಯ ವ್ಯಕ್ತಪಡಿಸಿದ್ದಾರೆ. ಆದರೆ ಅರ್ಹತೆ ಹೊಂದಬೇಕಾದರೆ ಅವರು, 55.8 ಸೆಕೆಂಡುಗಳ ಒಳಗಾಗಿ ಗುರಿ ಮುಟ್ಟಬೇಕಾದ ಅಗತ್ಯವಿದೆ.
Khelo India University Games ಕ್ರೀಡೆ ಬದುಕಿನ ಭಾಗವಾಗಲಿ: ವೆಂಕಯ್ಯ ನಾಯ್ಡು
“ನನ್ನ ವೈಯಕ್ತಿಕ ಉತ್ತಮ ಸಾಧನೆ 57.6 ಸೆಕೆಂಡುಗಳು. ನನಗೆ 100 ಮೀ. ಬ್ಯಾಕ್ ಸ್ಟ್ರೋಕ್ ನಲ್ಲಿ ಈಗಾಗಲೇ ಅರ್ಹತೆ ಪಡೆದಿರುವ ಶ್ರೀಹರಿ ನಟರಾಜ್ ಅವರೊಂದಿಗೆ ಭಾರತವನ್ನು ಪ್ರತಿನಿಧಿಸಬೇಕೆಂಬ ಹಂಬಲವಿದೆ. ಇದು ಈ ವರ್ಷದ ನನ್ನ ಗುರಿ, ಇಲ್ಲಿ ಮಾಡಿರುವ ದಾಖಲೆ ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ,” ಎಂದರು.