66 ವರ್ಷದ ಮಾಜಿ ಕ್ರಿಕೆಟಿಗ ಅರುಣ್ ಲಾಲ್ ಗೆ 2ನೇ ಮದುವೆ, 38 ವರ್ಷದ ಬುಲ್ ಬುಲ್ ವಧು!

ಭಾರತದ ಪರವಾಗಿ 16 ಟೆಸ್ಟ್ ಹಾಗೂ 13 ಏಕದಿನ ಪಂದ್ಯಗಳನ್ನು ಆಡಿರುವ ಅರುಣ್ ಲಾಲ್ ತಮ್ಮ 66ನೇ ವರ್ಷದಲ್ಲಿ 2ನೇ ಮದುವೆಯಾಗಲು ಅಣಿಯಾಗಿದ್ದಾರೆ. ಪ್ರಸ್ತುತ ಬಂಗಾಳ ರಣಜಿ ತಂಡದ ಕೋಚ್ ಆಗಿರುವ ಅರುಣ್ ಲಾಲ್ ಮುಂದಿನ ವಾರ 38 ವರ್ಷದ ಬುಲ್ ಬುಲ್ ಅವರನ್ನು ವಿವಾಹವಾಗಲಿದ್ದಾರೆ.
 

66 year old former cricketer Arun Lal will be groom for the second time will marry 38 year old Bulbul san

ನವದೆಹಲಿ (ಏ. 25): ಟೀಮ್ ಇಂಡಿಯಾ (Team India) ಮಾಜಿ ಕ್ರಿಕೆಟಿಗೆ ಅರುಣ್ ಲಾಲ್ (Arun Lal) 2ನೇ ಮದುವೆಯಾಗಲು ಅಣಿಯಾಗಿದ್ದಾರೆ. ಅದೂ ತಮ್ಮ 66ನೇ ವರ್ಷದಲ್ಲಿ ಎನ್ನುವುದು ವಿಶೇಷವಾಗಿದೆ. ಅರುಣ್ ಲಾಲ್ ಅವರು ಮದುವೆಯಾಗಲಿರುವ ಹುಡುಗಿಯ ಹೆಸರು ಬುಲ್ ಬುಲ್ ಸಾಹಾ (Bul Bul Saha).  ಬುಲ್ ಬುಲ್ ಅವರ ವಯಸ್ಸು 38 ವರ್ಷ. ತನಗಿಂತ 28 ವರ್ಷಕಡಿಮೆ ವಯಸ್ಸಿನ ಹುಡುಗಿಯನ್ನು ಅರುಣ್ ಲಾಲ್ ವಿವಾಹವಾಗಲಿದ್ದಾರೆ.

ಕ್ಯಾನ್ಸರ್ (cancer survivor,) ಗುಣಮುಖರಾಗಿರುವ ಅರುಣ್ ಲಾಲ್, ಮೊದಲ ಪತ್ನಿ ರೀನಾ ಅವರ ಒಪ್ಪಿಗೆಯ ಮೇರೆಗೆ 2ನೇ ವಿವಾಹವಾಗುತ್ತಿದ್ದಾರೆ ಎನ್ನುವುದು ವಿಶೇಷ. ಮುಂದಿನ ವಾರ ಇವರ ವಿವಾಹ ಸಮಾರಂಭ ನಡೆಯಲಿದೆ.

ಅರುಣ್ ಲಾಲ್ ಹಾಗೂ ಬುಲ್ ಬುಲ್ ಬಹಳ ವರ್ಷಗಳಿಂದ ಪರಿಚಿತರು, ಅಲ್ಲದೆ, ಉತ್ತಮ ಸ್ನೇಹಿತರಾಗಿಯೂ ಇದ್ದಾರೆ. ಮದುವೆಯ ಆಮಂತ್ರಣ ಪತ್ರಿಕೆಯನ್ನೂ ಅರುಣ್ ಲಾಲ್ ಮಾಡಿಸಿದ್ದು, ಈಗಾಗಲೇ ಕೆಲ ಆಪ್ತರಿಗೆ ಆಮಂತ್ರಣ ಪತ್ರವನ್ನೂ ನೀಡಿದಿದ್ದಾರೆ ಎಂದು ವರದಿಯಾಗಿದೆ. ಮೇ 2 ರಂದು ಕೋಲ್ಕತದ ಪೀಯರ್ ಲೆಸ್ ಇನ್ ಹೋಟೆಲ್ ನಲ್ಲಿ ಮದುವೆ ಸಮಾರಂಭ ನಡೆಯಲಿದೆ. ಮದುವೆ ಬಳಿಕ ಕ್ರಿಕೆಟ್ ವಲಯದ ಸ್ನೇಹಿತರಿಗೆ (Cricket Friends) ಹಾಗೂ ಕೆಲ ಆಪ್ತ ಸ್ನೇಹಿತರಿಗಾಗಿ ಅರುಣ್ ಲಾಲ್ ಆರತಕ್ಷತೆ ಕಾರ್ಯಕ್ರಮವನ್ನು ಏರ್ಪಡಿಸಿದ್ದಾರೆ.

ಅರುಣ್ ಲಾಲ್ ಗೆ ಇದು 2ನೇ ಮದುವೆಯಾಗಿದ್ದು, ಮೊದಲ ಪತ್ನಿ ರೀನಾರಿಂದ (Reena) ಈಗಾಗಲೇ ವಿಚ್ಛೇದನ ಪಡೆದುಕೊಂಡಿದ್ದಾರೆ. ಇಬ್ಬರೂ ಪರಸ್ಪರ ಒಪ್ಪಿಗೆಯೊಂದಿಗೆ ವಿಚ್ಛೇದನ ಪಡೆದುಕೊಂಡಿದ್ದರು. ಮೂಲಗಳ ವರದಿಯ ಪ್ರಕಾರ, ರೀನಾ ಕಳೆದ ಕೆಲ ವರ್ಷಗಳಿಂದ ಅನನಾರೋಗ್ಯಕ್ಕೆ ತುತ್ತಾಗಿದ್ದಾರೆ ಎನ್ನಲಾಗಿದೆ. ರೀನಾ ಅವರ ಇಚ್ಛೆಯ ಮೇರೆಗೆ ಅರುಣ್ ಲಾಲ್ ಮತ್ತೆ ಮದುವೆಯಾಗುತ್ತಿದ್ದಾರೆ ಎಂದು ಹೇಳಲಾಗಿದೆ. ಬಹಳ ವರ್ಷಗಳಿಂದ ಪರಿಚಿತರಾಗಿದ್ದ ಅರುಣ್ ಲಾಲ್ ಹಾಗೂ ಬುಲ್ ಬುಲ್ ಅವರ ನಿಶ್ಚಿತಾರ್ಥ ಕಳೆದ ತಿಂಗಳು ನೆರವೇರಿದೆ ಎಂದು ಹೇಳಲಾಗಿದೆ.

1955 ರ ಆಗಸ್ಟ್ 1 ರಂದು ಜನಿಸಿದ್ದ ಅರುಣ್ ಲಾಲ್, ಉತ್ತರ ಪ್ರದೇಶದ ಮೊರದಾಬಾದ್ ಮೂಲದವರು. ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಬಂಗಾಳ ತಂಡವನ್ನು ಪ್ರತಿನಿಧಿಸಿದ್ದರು. ಬಂಗಾಳ ಕ್ರಿಕೆಟ್ ಸಂಸ್ಥೆ ಅಧಿಕಾರಿಗಳು, ಮಾಜಿ ಕ್ರಿಕೆಟಿಗರು, ಬಂಗಾಳ ಕ್ರಿಕೆಟ್ ತಂಡದ ಆಟಗಾರರು ಹಾಗೂ ಕುಟುಂಬದ ಆಪ್ತರನ್ನು ಮದುವೆ ಸಮಾರಂಭಕ್ಕೆ ಆಹ್ವಾನಿಸಲಾಗಿದೆ. ತಮ್ಮ ಕ್ರಿಕೆಟ್ ಜೀವನದಲ್ಲಿ 16 ಟೆಸ್ಟ್, 13 ಏಕದಿನ ಪಂದ್ಯಗಳನ್ನು ಅರುಣ್ ಲಾಲ್ ಆಡಿದ್ದಾರೆ. ಈ ಅವಧಿಯಲ್ಲಿ ಭಾರತ ತಂಡದ ಪರವಾಗಿ ಟೆಸ್ಟ್ ನಲ್ಲಿ 729 ರನ್ ಹಾಗೂ ಏಕದಿನದಲ್ಲಿ 122 ರನ್ ಬಾರಿಸಿದ್ದಾರೆ. ತಮ್ಮ ಇಡೀ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನದಲ್ಲಿ ಅರುಣ್ ಲಾಲ್ ಶತಕ ಬಾರಿಸಿರಲಿಲ್ಲ. ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 156 ಪಂದ್ಯಗಳನ್ನು ಆಡಿದ್ದ ಅರುಣ್ ಲಾಲ್, 30 ಶತಕಗಳೊಂದಿಗೆ 10, 421 ರನ್ ಬಾರಿಸಿದ ಅಭೂತಪೂರ್ವ ದಾಖಲೆ ಹೊಂದಿದ್ದಾರೆ. 

IPL 2022: ವಿರೋಧಿಗಳೇ RCB 68ಕ್ಕೆ ಆಲೌಟಾದ ಮಾತ್ರಕ್ಕೆ ಖುಷಿಪಡಬೇಡಿ..!

1982ರಲ್ಲಿ ಇಂಗ್ಲೆಂಡ್ ವಿರುದ್ಧ ಕಟಕ್ ನಲ್ಲಿ ಅರುಣ್ ಲಾಲ್ ತಮ್ಮ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದರೆ, 1989ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕಿಂಗ್ ಸ್ಟನ್ ನಲ್ಲಿ ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದರು.

IPL 2022: ಪ್ರತಿಭೆ ಇದ್ರೂ ಈ ನಾಲ್ವರಿಗೆ ಚಾನ್ಸ್ ಕೊಡ್ತಿಲ್ಲ ಫ್ರಾಂಚೈಸಿಗಳು..!

ದವಡೆ ಕ್ಯಾನ್ಸರ್ ಗೆ ತುತ್ತಾಗಿದ್ದ ಅರುಣ್ ಲಾಲ್: 2016ರಲ್ಲಿ ದವಡೆ ಕ್ಯಾನ್ಸರ್ ಗೆ ತುತ್ತಾಗಿದ್ದ ಅರುಣ್ ಲಾಲ್, ಇದೇ ಕಾರಣಕ್ಕಾಗಿ ಕ್ರಿಕೆಟ್ ವಿಶ್ಲೇಷಣೆಯನ್ನೂ ತೊರೆದಿದ್ದರು. ಅದಕ್ಕೂ ಮುನ್ನ ಅಂತಾರಾಷ್ಟ್ರೀಯ ಹಾಗೂ ದೇಶೀಯ ಪಂದ್ಯಗಳ ವೇಳೆ ವಿಶ್ಲೇಷಕರ ಪ್ಯಾನೆಲ್ ನಲ್ಲಿನ ಪ್ರಸಿದ್ಧ ಹೆಸರಾಗಿದ್ದರು.  ಕ್ಯಾನ್ಸರ್ ನಿಂದ ಗುಣಮುಖರಾದ ಬಳಿಕ, ಬಂಗಾಳ ರಣಜಿ ತಂಡದ ಕೋಚ್ ಆಗಿ ನೇಮಕವಾಗಿದ್ದರು.
 

Latest Videos
Follow Us:
Download App:
  • android
  • ios