Asianet Suvarna News Asianet Suvarna News

ಖೇಲೋ ವಿವಿ ಗೇಮ್ಸ್‌ಗೆ ಅದ್ಧೂರಿ ತೆರೆ; ಪಂಜಾಬ್‌ ಚಾಂಪಿ​ಯನ್‌

ಮೂರನೇ ಆವೃತ್ತಿಯ ಖೇಲೋ ಇಂಡಿಯಾ ವಿವಿ ಗೇಮ್ಸ್‌ ಮುಕ್ತಾಯ
ಕಳೆದ ಬಾರಿ ಸಮಗ್ರ ಚಾಂಪಿ​ಯನ್‌ ಪಟ್ಟಅಲಂಕ​ರಿ​ಸಿದ್ದ ಜೈನ್ ವಿವಿಗೆ ಮೂರನೇ ಸ್ಥಾನ
ಮೇ 25ರಂದು ಆರಂಭ​ಗೊಂಡಿದ್ದ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌

Khelo India University Games concludes Panjab University kvn
Author
First Published Jun 4, 2023, 7:11 AM IST

ಲಖ​ನೌ(ಜೂ.04): 3ನೇ ಆವೃ​ತ್ತಿಯ ಖೇಲೋ ಇಂಡಿಯಾ ಯುನಿ​ವ​ರ್ಸಿಟಿ ಗೇಮ್ಸ್‌​ ಶನಿ​ವಾರ ಅದ್ಧೂರಿ ತೆರೆ ಕಂಡಿದ್ದು, ಕಳೆದ ಬಾರಿ ಸಮಗ್ರ ಚಾಂಪಿ​ಯನ್‌ ಪಟ್ಟಅಲಂಕ​ರಿ​ಸಿದ್ದ ಬೆಂಗ​ಳೂ​ರಿನ ಜೈನ್‌ ವಿವಿ ಈ ಬಾರಿ 3ನೇ ಸ್ಥಾನ ಪಡೆ​ದು​ಕೊಂಡಿ​ದೆ.

ಮೇ 25ರಂದು ಆರಂಭ​ಗೊಂಡ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ (Khelo India University Games) ಕೂಟದ ಸಮಾ​ರೋಪ ಸಮಾ​ರಂಭ ಶನಿ​ವಾರ ನಡೆ​ಯಿತು. ಉತ್ತರ ಪ್ರದೇಶ ಸಿಎಂ ಯೋಗಿ ಆದಿ​ತ್ಯ​ನಾಥ್‌, ಕೇಂದ್ರ ಕ್ರೀಡಾ ಸಚಿವ ಅನು​ರಾಗ್‌ ಠಾಕೂರ್‌ ಸೇರಿ​ದಂತೆ ಪ್ರಮು​ಖರು ಪಾಲ್ಗೊಂಡರು. ಕೂಟ​ದಲ್ಲಿ ಪಂಜಾಬ್‌ ವಿವಿ 26 ಚಿನ್ನ ಸೇರಿ​ದಂತೆ ಒಟ್ಟು 69 ಪದ​ಕ​ಗ​ಳೊಂದಿಗೆ ಸಮಗ್ರ ಚಾಂಪಿ​ಯನ್‌ ಎನಿ​ಸಿ​ಕೊಂಡರೆ, ಅಮೃ​ತ್‌​ಸ​ರದ ಗುರುನಾನಕ್‌ ದೇವ್‌ ವಿವಿ 24 ಚಿನ್ನ ಸೇರಿ 68 ಪದ​ಕ​ಗೊಂದಿಗೆ 2ನೇ ಸ್ಥಾನಿಯಾ​ಯಿತು. ಈಜಿ​ನಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿ​ಸಿದ್ದ ಜೈನ್‌ ವಿವಿ 16 ಚಿನ್ನ, 10 ಬೆಳ್ಳಿ, 6 ಕಂಚಿ​ನೊಂದಿಗೆ 32 ಪದಕ ತನ್ನ​ದಾ​ಗಿ​ಸಿ​ಕೊಂಡಿ​ತು.

ಟಾಪ್‌-5 ಪದಕ ಪಟ್ಟಿ

ವಿವಿ ಚಿ​ನ್ನ ​ಬೆ​ಳ್ಳಿ ​ಕಂಚು ಒ​ಟ್ಟು

ಪಂಜಾ​ಬ್‌ 26 17 26 69

ಗುರು​ನಾ​ನ​ಕ್‌ 24 27 17 68

ಜೈನ್‌ 16 10 06 32

ಪಂಜಾ​ಬಿ 12 14 08 34

ಗುರು ಕಾಶಿ 09 10 09 28

ಅಥ್ಲೆ​ಟಿ​ಕ್ಸ್‌: ಜಾವೆ​ಲಿ​ನ್‌ ಬಂಗಾರ ಗೆದ್ದ ಕರಿ​ಶ್ಮಾ

ಬೆಂಗ​ಳೂ​ರು: ನಗ​ರದ ಕಂಠೀ​ರವ ಕ್ರೀಡಾಂಗ​ಣ​ದಲ್ಲಿ ಶನಿ​ವಾರ ಆರಂಭ​ಗೊಂಡ ರಾಜ್ಯ ಹಿರಿ​ಯರ ಮುಕ್ತ ಅಥ್ಲೆ​ಟಿಕ್ಸ್‌ ಚಾಂಪಿ​ಯ​ನ್‌​ಶಿ​ಪ್‌​ನಲ್ಲಿ ತಾರಾ ಜಾವೆ​ಲಿನ್‌ ಎಸೆ​ತ​ಗಾರ್ತಿ ಕರಿಶ್ಮಾ ಚಾಂಪಿ​ಯನ್‌ ಆಗಿ​ದ್ದಾರೆ. ಮಹಿಳಾ ವಿಭಾ​ಗ​ದಲ್ಲಿ ಉಡು​ಪಿಯ ಕರಿಶ್ಮಾ 43.21 ಮೀ. ದೂರಕ್ಕೆ ಎಸೆದು ಅಗ್ರ​ಸ್ಥಾನ ಪಡೆ​ದರೆ, ಪುರು​ಷರ ವಿಭಾ​ಗ​ದಲ್ಲಿ ಬೆಳ​ಗಾ​ವಿಯ ವಿಜ​ಯ್‌​(61.46 ಮೀ.) ಪ್ರಶಸ್ತಿ ಗೆದ್ದ​ರು. 

ಫ್ರೆಂಚ್‌ ಓಪನ್‌ ಗ್ರ್ಯಾನ್‌ಸ್ಲಾಂ ಟೆನಿ​ಸ್‌: ಪ್ರಿ ಕ್ವಾರ್ಟ​ರ್‌​ಗೇ​ರಿದ ಆಲ್ಕ​ರಜ್‌, ಇಗಾ!

ಮಹಿ​ಳೆ​ಯರ 400 ಮೀ. ಓಟ​ದಲ್ಲಿ ಸಿಂಚಲ್‌ ಕಾವೇ​ರ​ಮ್ಮ, 100 ಮೀ. ಹರ್ಡ​ಲ್ಸ್‌​ನಲ್ಲಿ ಮೇಧಾ, ಶಾಟ್‌​ಪು​ಟ್‌​ನಲ್ಲಿ ಮೈಸೂ​ರಿನ ಅಂಬಿಕಾ ಚಾಂಪಿ​ಯನ್‌ ಆದರು. ಪುರು​ಷರ ಲಾಂಗ್‌​ಜಂಪ್‌​ನ​ಲ್ಲಿ ಏರ್‌​ಫೋ​ರ್ಸ್‌ನ ಸಿದ್ಧಾಥ್‌ರ್‍ ನಾಯ್‌್ಕ, ಹೈ ಜಂಪ್‌​ನಲ್ಲಿ ಜೆಸ್ಸಿ ಸಂದೇಶ್‌ ಚಿನ್ನದ ಪದಕ ತಮ್ಮ​ದಾ​ಗಿ​ಸಿ​ಕೊಂಡ​ರು.

ಸರ್ಫಿಂಗ್‌: ಕಿಶೋರ್‌, ಕಮಲ ಚಾಂಪಿ​ಯ​ನ್‌

ಮಂಗ​ಳೂ​ರು: ಸಸಿಹಿತ್ಲು ಬೀಚ್‌ನಲ್ಲಿ ನಡೆದ 4ನೇ ಇಂಡಿಯನ್‌ ಓಪನ್‌ ಸರ್ಫಿಂಗ್‌ ಚಾಂಪಿಯ​ನ್‌​ಶಿ​ಪ್‌​ನಲ್ಲಿ ನಿರೀ​ಕ್ಷೆ​ಯಂತೆ ತಮಿಳುನಾಡು ಪ್ರಾಬಲ್ಯ ಮೆರೆದಿದ್ದು, ಪುರು​ಷರ 2 ವಿಭಾ​ಗ​ದಲ್ಲಿ ತಮಿ​ಳು​ನಾ​ಡಿದ ಕಿಶೋರ್‌ ಕುಮಾರ್‌, ಮಹಿ​ಳೆ​ಯರ 2 ವಿಭಾ​ಗ​ಗ​ಳಲ್ಲಿ ಕಮ​ಲ​ಮೂರ್ತಿ ಚಾಂಪಿಯನ್‌ ಆಗಿ ಮೂಡಿ ಬಂದಿದ್ದಾರೆ.

ಪುರುಷರ ವಿಭಾಗದಲ್ಲಿ ತಮಿ​ಳು​ನಾಡು ಕ್ಲೀನ್‌​ಸ್ವೀಪ್‌ ಸಾಧಿ​ಸಿತು. ಕಿಶೋರ್‌ (14 ಅಂಕ) ಪ್ರಥಮ ಸ್ಥಾನ ಪಡೆ​ದರೆ, ಶ್ರೀಕಾಂತ್‌​(11.66 ಅಂಕ) ದ್ವಿತೀ​ಯ, ಸೂರ್ಯ ಪಿ.(11 ಅಂಕ) ತೃತೀಯ ಸ್ಥಾನ ಪಡೆ​ದರು. ಚಾಂಪಿಯನ್‌ ಕಿಶೋರ್‌ 50,000 ರು. ನಗದು ಪಡೆ​ದರು. ಅಂಡ​ರ್‌-16 ವಿಭಾ​ಗ​ದಲ್ಲಿ ಕಿಶೋ​ರ್‌ 15.07 ಅಂಕ​ದೊಂದಿ​ಗೆ ಪ್ರಶಸ್ತಿ ಗೆದ್ದರೆ, ತಾಯಿನ್‌ ಅರು​ಣ್‌​(8.97 ಅಂಕ) ದ್ವಿತೀಯ, ಹರೀಶ್‌(6.27) ತೃತೀಯ ಸ್ಥಾನ ಪಡೆದರು.

ಮಹಿಳೆಯರ ವಿಭಾಗದಲ್ಲಿ ಕಮಲಿಮೂರ್ತಿ(12.07 ಅಂಕ) ಪ್ರಥಮ, ಗೋವಾದ ಸುಗರ್‌ ಬನ್ಸಾರೆ ದ್ವಿತೀಯ ಹಾಗೂ ಕರ್ನಾಟಕದ ಪುತ್ತೂರಿನ ಸಿಂಚನಾ ಗೌಡ ತೃತೀಯ ಸ್ಥಾನ ಪಡೆದರು. ಅಂಡ​ರ್‌-16 ವಿಭಾ​ಗ​ದ​ಲ್ಲಿ ಕಮಲಿಮೂರ್ತಿ 16.84 ಅಂಕದೊಂದಿಗೆ ಪ್ರಥಮ, ಕರ್ನಾಟಕದ ತನಿಷ್ಕಾ ಮೆಂಡನ್‌ 6.43 ಅಂಕದೊಂದಿಗೆ ದ್ವಿತೀಯ ಹಾಗೂ ಮಂಗಳೂರಿನ ಸಾನ್ವಿ ಹೆಗ್ಡೆ 6 ಅಂಕದೊಂದಿಗೆ ತೃತೀಯ ಸ್ಥಾನ ಗಳಿ​ಸಿ​ದರು.

ಕಿರಿ​ಯರ ವಿಶ್ವ ಶೂಟಿಂಗ್‌: ಚಿನ್ನ ಗೆದ್ದ ಭಾರ​ತದ ಸೈನ್ಯಂ

ಸಹ್‌್ಲ​(​ಜ​ರ್ಮ​ನಿ​): ಭಾರ​ತದ ಯುವ ಶೂಟರ್‌ ಸೈನ್ಯಂ ಇಲ್ಲಿ ನಡೆ​ಯುತ್ತಿ​ರುವ ಐಎ​ಸ್‌​ಎ​ಸ್‌​ಎಫ್‌ ಕಿರಿ​ಯರ ವಿಶ್ವ​ಕ​ಪ್‌​ನಲ್ಲಿ ಚಿನ್ನದ ಪದಕ ಗೆದ್ದಿ​ದ್ದಾರೆ. ಶನಿ​ವಾರ ಮಹಿ​ಳೆ​ಯರ 10 ಮೀ. ಏರ್‌ ಪಿಸ್ತೂಲ್‌ ವಿಭಾ​ಗ​ದಲ್ಲಿ ಸೈನ್ಯಂ 238 ಅಂಕ ಗಳಿಸಿ ಅಗ್ರಸ್ಥಾನ ಪಡೆ​ದರು. ಆದರೆ ಸುರುಚಿ ಸಿಂಗ್‌​(154.1 ಅಂಕ) 6ನೇ ಸ್ಥಾನಕ್ಕೆ ತೃಪ್ತಿ​ಪ​ಟ್ಟು​ಕೊಂಡರು. ಕೊರಿ​ಯಾದ ಕಿಮ್‌ ಮಿನ್ಸೋ ಬೆಳ್ಳಿ, ಚೈನೀಸ್‌ ತೈಪೆಯ ಲಿಯು ಹೆಂಗ್‌ ಯು ಕಂಚು ತಮ್ಮ​ದಾ​ಗಿ​ಸಿ​ಕೊಂಡರು.

Follow Us:
Download App:
  • android
  • ios