ನವದೆಹಲಿ(ಸೆ.20): ಪ್ಯಾರಾಲಿಂಪಿಕ್ಸ್ ಪದಕ ವಿಜೇತರಿಗೆ ಸಿಹಿ ಸುದ್ದಿ ಸಿಕ್ಕಿದೆ. ರಿಯೋ ಪ್ಯಾರಾಲಿಂಪಿಕ್ಸ್ ಪದಕ ವಿಜೇತರಿಗೂ ಖೇಲ್ ರತ್ನ ಪ್ರಶಸ್ತಿ ನೀಡಿ ಗೌರವಿಸಲು ಸರಕಾರ ಮುಂದಾಗಿದೆ.
ಈ ಬಾರಿ ರಿಯೋ ಪ್ಯಾರಾಲಿಂಪಿಕ್ಸ್ ಪದಕ ಸಾಧನೆ ಮಾಡಿದ ಎಲ್ಲ ಕ್ರೀಡಾ ಸ್ಪರ್ಥಿಗಳಿಗೂ ಮುಂದಿನ ವರ್ಷ ಖೇಲ್ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕ್ರೀಡಾ ಸಚಿವ ವಿಜಯ್ ಗೋಯಲ್ ಘೋಷಿಸಿದ್ದಾರೆ.
ಪ್ಯಾರಾಲಿಂಪಿಕ್ಸ್ ನಲ್ಲಿ ಈ ಬಾರಿ ಭಾರತಕ್ಕೆ ಒಟ್ಟು 4 ಪದಕಗಳ ಸಿಕ್ಕಿವೆ. ಅದರಲ್ಲಿ ಎರಡು ಬಂಗಾರ, ಒಂದು ಬೆಳ್ಳಿ, ಒಂದು ಕಂಚು ದೊರೆತಿದ್ದು, ಈ ಸಾಧನೆ ಮಾಡಿದ ನಾಲ್ವರಿಗೂ ಮುಂದಿನ ವರ್ಷ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
