ನವದೆಹಲಿ: 18ನೇ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ವಿಜೇತ ಕುಸ್ತಿಪಟುಗಳಾದ ಭಜರಂಗ್ ಪೂನಿಯಾ ಮತ್ತು ವಿನೇಶ್ ಪೋಗಾಟ್, ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ರೇಸ್‌ನಲ್ಲಿದ್ದಾರೆ. 

ಕಾಮನ್‌ವೆಲ್ತ್ ಗೇಮ್ಸ್‌ನಲ್ಲೂ ಇಬ್ಬರು ಚಿನ್ನ ಗೆದ್ದಿದ್ದಾರೆ. ಭಜರಂಗ್ ಹೆಸರನ್ನು ಈಗಾಗಲೇ ಭಾರತ ಕುಸ್ತಿ ಒಕ್ಕೂಟ (ಡಬ್ಲ್ಯುಎಫ್‌ಐ) ಶಿಫಾರಸು ಮಾಡಿದ್ದರೆ, ವಿನೇಶ್‌ರನ್ನು ಕ್ರೀಡಾ ಸಚಿವಾಲಯವೇ ಪ್ರಶಸ್ತಿಗೆ ಪರಿಗಣಿಸಿದೆ. 

ಭಜರಂಗ್ ಹಾಗೂ ವಿನೇಶ್ ಪೋಗಾಟ್ ಇಬ್ಬರಿಗೂ ಖೇಲ್ ರತ್ನ ಪ್ರಶಸ್ತಿಗೆ ಅರ್ಹರಾಗಿದ್ದಾರೆ. ಭಾರತ ಕುಸ್ತಿ ಫೆಡರೇಶನ್ ಶಿಫಾರಸಿಗೆ, ಭಾರತ ಕ್ರೀಡಾ ಸಚಿವಾಲಯ ಕೂಡ ಸ್ಪಂದಿಸಿದೆ ಎಂದಿದ್ದಾರೆ.