ನವ​ದೆ​ಹ​ಲಿ(ಆ.24): ಇದೇ ಮೊದಲ ಬಾರಿಗೆ ದೇಶದ ಅತ್ಯು​ನ್ನತ ಕ್ರೀಡಾ ಪ್ರಶಸ್ತಿ ಖೇಲ್‌ ರತ್ನವನ್ನು 5 ಕ್ರೀಡಾ​ಪ​ಟು​ಗ​ಳಿಗೆ ನೀಡ​ಲಾ​ಗುತ್ತಿದೆ. ಆದರೆ ಅಂತಾ​ರಾ​ಷ್ಟ್ರೀಯ ಕ್ರೀಡಾಕೂಟಗಳಲ್ಲಿ ಅತ್ಯು​ತ್ತಮ ಪ್ರದರ್ಶನ ನೀಡಿ​ರುವ ಯುವ ಜಾವೆ​ಲಿನ್‌ ಥ್ರೋ ಪಟು ನೀರಜ್‌ ಚೋಪ್ರಾ ಹೆಸ​ರನ್ನು ಪ್ರಶ​ಸ್ತಿಗೆ ಪರಿ​ಗ​ಣಿ​ಸದೆ ಇರು​ವು​ದಕ್ಕೆ ಸಾಮಾ​ಜಿಕ ತಾಣಗಳಲ್ಲಿ ಅನೇಕ ಕ್ರೀಡಾ​ಭಿ​ಮಾ​ನಿ​ಗಳು ಆಕ್ಷೇಪ ವ್ಯಕ್ತ​ಪ​ಡಿ​ಸಿ​ದ್ದಾರೆ. 

ಈ ವರ್ಷದ ಪ್ರಶ​ಸ್ತಿಗೆ ಕಳೆದ 4 ವರ್ಷಗಳ ಪ್ರದ​ರ್ಶ​ನ​ವನ್ನು ಪರಿ​ಗ​ಣಿ​ಸ​ಲಾ​ಗಿದೆ. ನೀರಜ್‌, 2016ರಲ್ಲಿ ಕಿರಿ​ಯವ ವಿಶ್ವ ಚಾಂಪಿ​ಯನ್‌ ಆಗಿ​ದ್ದ​ಲ್ಲದೇ, ಕಿರಿ​ಯರ ವಿಭಾ​ಗ​ದಲ್ಲಿ ವಿಶ್ವ ದಾಖಲೆ ಸಹ ನಿರ್ಮಿ​ಸಿ​ದ್ದರು. 2017ರಲ್ಲಿ ಏಷ್ಯನ್‌ ಚಾಂಪಿ​ಯನ್‌ಶಿಪ್‌ ಗೆದ್ದಿದ್ದ ನೀರಜ್‌, 2018ರ ಕಾಮನ್‌ವೆಲ್ತ್‌ ಹಾಗೂ ಏಷ್ಯನ್‌ ಗೇಮ್ಸ್‌ನಲ್ಲಿ ಚಿನ್ನ ಜಯಿ​ಸಿ​ದ್ದರು. ಅಥ್ಲೇಟಿಕ್ಸ್ ಫೆಡರೇಷನ್ ಆಫ್ ಇಂಡಿಯಾ ಜಾವಲಿನ್ ಪಟು ನೀರಜ್ ಚೋಪ್ರಾ ಅವರ ಹೆಸರನ್ನು ಖೇಲ್‌ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಿತ್ತು. 2021ರ ಒಲಿಂಪಿಕ್ಸ್‌ಗ ಅರ್ಹತೆ ಗಳಿ​ಸಿ​ರುವ ನೀರಜ್‌ ಪದಕ ಗೆಲ್ಲುವ ಭರ​ವಸೆ ಮೂಡಿ​ಸಿ​ದ್ದಾರೆ.

ಮೊದಲೆಲ್ಲಾ ನಾವು ಪ್ರಶಸ್ತಿಗಳನ್ನು ಗಳಿಸುತ್ತಿದ್ದೆವು, ಆದರೆ ಈಗ ಅರ್ಜಿ ಹಾಕಿ ಪ್ರಶಸ್ತಿ ಪಡೆಯುತ್ತಿದ್ದಾರೆ ಎಂದು ಹೆಸರು ಹೇಳಲಿಚ್ಚಿಸದ ರಾಜೀವ್ ಗಾಂಧಿ ಖೇಲ್‌ ರತ್ನ ಪ್ರಶಸ್ತಿ ವಿಜೇಯ ಕ್ರೀಡಾಪಟುವೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. 

ರೋಹಿತ್ ಶರ್ಮಾ, ರಾಣಿ ಸೇರಿ ಐವರಿಗೆ ಖೇಲ್ ರತ್ನ ಪ್ರಶಸ್ತಿ ಗೌರವ

ಈ ಬಾರಿ ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾ, ಕುಸ್ತಿಪಟು ವಿನೇಶಾ ಫೋಗಟ್, ಟೇಬಲ್ ಟೆನಿಸ್ ಆಟಗಾರ್ತಿ ಮನಿಕಾ ಭಾತ್ರ, ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಮತ್ತು ಪ್ಯಾರಾ ಅಥ್ಲೀಟ್ ಮರಿಯಪ್ಪನ್ ತಂಗವೇಲು ರಾಜೀವ್ ಗಾಂಧಿ ಖೇಲ್‌ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದೇ ವೇಳೆ ರೋಹಿತ್‌ಗೆ ಖೇಲ್‌ ರತ್ನ ಪ್ರಶಸ್ತಿ ನೀಡಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ರೋಹಿತ್‌ಗಿಂತ ಯುವರಾಜ್‌ ಸಿಂಗ್ ಅವರು ಈ ಪ್ರಶಸ್ತಿಗೆ ಹೆಚ್ಚು ಅರ್ಹವಾದ ವ್ಯಕ್ತಿ ಎನ್ನುವ ಮಾತುಗಳು ಕೇಳಿ ಬಂದಿವೆ.