ತಿರುವನಂತಪುರಂ[ನ.01]: ಪ್ರವಾಹದಿಂದ ನಲುಗಿದ್ದ ಕೇರಳದಲ್ಲಿ ಈಗ ಎಲ್ಲವೂ ಸರಿ ಹೋಗಿದೆ. ಜನರು ಭೇಟಿ ನೀಡಿ, ದೇವರ ನಾಡಿನ ಸೊಬಗನ್ನು ಆನಂದಿಸಬಹುದು ಎಂದು ವಿರಾಟ್‌ ಕೊಹ್ಲಿ ತಿಳಿಸಿದ್ದಾರೆ. 

ಇಲ್ಲಿ ತಾವು ಉಳಿದುಕೊಂಡಿರುವ ರೆಸಾರ್ಟ್‌ನ ಸಂದರ್ಶಕರ ಡೈರಿಯಲ್ಲಿ ಪ್ರತಿಕ್ರಿಯೆ ಬರೆದಿರುವ ಕೊಹ್ಲಿ, ‘ಕೇರಳಕ್ಕೆ ಭೇಟಿ ನೀಡುವುದು ಸುರಕ್ಷಿತ. ದೇವರ ನಾಡಿಗೆ ಬಂದಿರುವುದು ನನಗೆ ಖುಷಿ ನೀಡುತ್ತಿದೆ. ಇಲ್ಲಿಗೆ ಆಗಮಿಸುವುದು ಆನಂದಕರ ಅನುಭವ’ ಎಂದು ಬರೆದಿದ್ದಾರೆ.

ಭಾರತ-ವೆಸ್ಟ್ ಇಂಡೀಸ್ ನಡುವಿನ 5ನೇ ಏಕದಿನ ಪಂದ್ಯವಿಂದು ತಿರುವನಂತಪುರಂನಲ್ಲಿ ನಡೆಯಲಿದ್ದು, ವಿರಾಟ್ ಪಡೆ ಈಗಾಗಲೇ 2-1ರ ಮುನ್ನಡೆ ಸಾಧಿಸಿದೆ. ಈ ಪಂದ್ಯವನ್ನು ಜಯಿಸುವುದರೊಂದಿಗೆ ಸರಣಿ ಗೆಲ್ಲುವ ವಿಶ್ವಾಸದಲ್ಲಿದೆ ಟೀಂ ಇಂಡಿಯಾ.