Asianet Suvarna News Asianet Suvarna News

ಸೆಮೀಸ್'ಗೆ ಲಗ್ಗೆಯಿಟ್ಟ ನಿಶಿಕೋರಿ, ವಾವ್ರಿಂಕಾ

ಮುಂದಿನ ಪಂದ್ಯದಲ್ಲಿ ವಾವ್ರಿಂಕಾ ರಷ್ಯಾದ ಆ್ಯಂಡ್ರೆ ಎದುರು ಸೆಣಸಲಿದ್ದಾರೆ.

Kei Nishikori Stan Wawrinka advance to Geneva semifinals
  • Facebook
  • Twitter
  • Whatsapp

ಜಿನೇವಾ(ಮೇ.26): ಅಗ್ರ ಶ್ರೇಯಾಂಕಿತ ಸ್ವಿಟ್ಜರ್‌'ಲ್ಯಾಂಡ್'ನ ಸ್ಟಾನಿಸ್ಲಾಸ್ ವಾವ್ರಿಂಕಾ ಹಾಗೂ 2ನೇ ಶ್ರೇಯಾಂಕಿತ ಜಪಾನ್‌'ನ ಕೇ ನಿಶಿಕೋರಿ, ಇಲ್ಲಿ ನಡೆಯುತ್ತಿರುವ ಜಿನೇವಾ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸೆಮಿಫೈನಲ್ ಹಂತ ಪ್ರವೇಶಿಸಿದ್ದಾರೆ.

ಕ್ವಾರ್ಟರ್‌'ಫೈನಲ್ ಪಂದ್ಯದಲ್ಲಿ ವಾವ್ರಿಂಕಾ 4-6, 7-5, 6-2 ಸೆಟ್‌'ಗಳಿಂದ ಅಮೆರಿಕದ ಸ್ಯಾಮ್ ಆಸ್ಟಿನ್ ಕೆರ್ರಿ ಎದುರು ಗೆಲುವು ಸಾಧಿಸಿದರು. ಮುಂದಿನ ಪಂದ್ಯದಲ್ಲಿ ವಾವ್ರಿಂಕಾ ರಷ್ಯಾದ ಆ್ಯಂಡ್ರೆ ಎದುರು ಸೆಣಸಲಿದ್ದಾರೆ.

ಮತ್ತೊಂದು ಎಂಟರ ಘಟ್ಟದ ಪಂದ್ಯದಲ್ಲಿ ನಿಶಿಕೋರಿ 2-6, 6-4, 7-6 (8-6) ಸೆಟ್‌'ಗಳಿಂದ ದಕ್ಷಿಣ ಆಫ್ರಿಕಾದ ಕೆವಿನ್ ಆ್ಯಂಡರ್ಸನ್ ವಿರುದ್ಧ ಜಯ ದಾಖಲಿಸಿದರು. ಸೆಮಿಫೈನಲ್‌ನಲ್ಲಿ ನಿಶೀಕೋರಿ, ಜರ್ಮನಿಯ ಮಿಸ್ಚಾ ಝೆವರೆಟ್ ಅವರನ್ನು ಎದುರಿಸಲಿದ್ದಾರೆ.

Follow Us:
Download App:
  • android
  • ios