ಬೆಂಗಳೂರು(ಸೆ.08) ಕರ್ನಾಟಕ ಚಲನ ಚಿತ್ರ ಕಪ್ ಟೂರ್ನಿಯ ಎರಡನೇ ಪಂದ್ಯದಲ್ಲಿ ಸ್ಯಾಂಡಲ್ ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತಂಡದ ವಿರುದ್ಧದ ಪಂದ್ಯದಲ್ಲಿ ರಾಕಿಂಗ್ ಸ್ಟಾರ್ ಯಶ್ ನೇೃತ್ವದ ರಾಷ್ಟ್ರಕೂಟ ಪ್ಯಾಂಥರ್ಸ್ ಗೆಲುವು ಸಾಧಿಸಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಷ್ಟ್ರಕೂಟ ಪ್ಯಾಂಥರ್ಸ್ ನಿಗದಿತ 10 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 113 ರನ್ ಸಿಡಿಸಿತು. ರಾಜೀವ್ ಅಜೇಯ 65 ರನ್ ಸಿಡಿಸಿ ಮಿಂಚಿದರು.

114 ರನ್ ಗುರಿ ಬೆನ್ನಟ್ಟಿದ ಶಿವಣ್ಣ ನೇತೃತ್ವದ ವಿಜಯನಗರ್ ಪೆಟ್ರೆಯೋಟ್ಸ್ ತಂಡ 109 ರನ್‌ಗಳಿಸಲಷ್ಟೇ ಸಾಧ್ಯವಾಯಿತು. ಈ ಮೂಲಕ ಸೋಲಿನ ಕಹಿ ಅನುಭವಿಸಿತು.