ಗಾಲೆ(ಆ.14): ಏಕದಿನ ವಿಶ್ವಕಪ್‌ ಫೈನಲ್‌ ಸೋಲಿನ ಬಳಿಕ ನ್ಯೂಜಿಲೆಂಡ್‌ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪಂದ್ಯವನ್ನಾಡಲು ಸಜ್ಜಾಗಿದ್ದು, ಟಾಸ್ ಗೆದ್ದ ನ್ಯೂಜಿಲೆಂಡ್ ಬ್ಯಾಟಿಂಗ್ ಆಯ್ದುಕೊಂಡಿದೆ. 

ಇಂಡೋ-ವಿಂಡೀಸ್ ಫೈಟ್: ಸರಣಿ ಜಯದ ಮೇಲೆ ಕಣ್ಣಿಟ್ಟ ಭಾರತ

ಶ್ರೀಲಂಕಾ ವಿರುದ್ಧ 2 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ವಿಲಿಯಮ್ಸನ್ ಪಡೆ ಪಾಲ್ಗೊಳ್ಳಲಿದೆ. ಕಿವೀಸ್ ಪರ ಭಾರತೀಯ ಮೂಲದ ಜೀತ್ ರಾವಲ್ ಸ್ಥಾನ ಪಡೆದಿದ್ದಾರೆ. ಈ ಸರಣಿ ಐಸಿಸಿ ಟೆಸ್ಟ್‌ ವಿಶ್ವ ಚಾಂಪಿಯನ್‌ನ ಭಾಗವಾಗಿದೆ.  ಕಿವೀಸ್‌ಗೆ ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶವಿದೆ. ಮೊದಲ ಪಂದ್ಯವನ್ನು ಗೆದ್ದರೆ ಭಾರತವನ್ನು ಹಿಂದಿಕ್ಕಿ ನ್ಯೂಜಿಲೆಂಡ್‌ ನಂ.1 ಸ್ಥಾನಕ್ಕೇರಲಿದೆ. 

ಲಂಕಾ ಅಭಿಮಾನಿಗಳ ಹೃದಯ ಗೆದ್ದ ಕೇನ್ ವಿಲಿಯಮ್ಸನ್!

ಇನ್ನು ಭಾರತ ತಂಡ ವಿಂಡೀಸ್‌ ವಿರುದ್ಧ 2 ಪಂದ್ಯಗಳ ಸರಣಿಯನ್ನು ಆಡಲಿದ್ದು, 2-0 ಅಂತರದಲ್ಲಿ ಸರಣಿ ಜಯಿಸಬೇಕಿದೆ. ಒಂದೊಮ್ಮೆ ಕಿವೀಸ್‌ 0-1 ಅಂತರದಲ್ಲಿ ಸರಣಿ ಸೋತರೆ 3ನೇ ಸ್ಥಾನಕ್ಕೆ ಕುಸಿಯಲಿದೆ. 0-2ರಲ್ಲಿ ಸೋತರೆ 4ನೇ ಸ್ಥಾನಕ್ಕಿಳಿಯಲಿದೆ.